ಆರ್​ಸಿಬಿಗಾಗಿ ಕಾರನ್ನು ವಿಶೇಷವಾಗಿ ಸಿದ್ಧಪಡಿಸಿದ ಮೈಸೂರಿನ ಅಭಿಮಾನಿಗಳು: ಫೋಟೋಸ್​ ನೋಡಿ

Edited By:

Updated on: Jun 02, 2025 | 4:19 PM

RCB Final Match: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಐಪಿಎಲ್ ಫೈನಲ್ ತಲುಪಿದೆ. ಮೈಸೂರಿನ ಅಭಿಮಾನಿಗಳು RCBಗಾಗಿ ವಿಶೇಷ ಕಾರನ್ನು ಸಿದ್ಧಪಡಿಸಿ, ಚಾಮುಂಡಿ ಬೆಟ್ಟದಲ್ಲಿ ಪೂಜೆ ಮಾಡಿಸಿದ್ದಾರೆ. 18 ವರ್ಷಗಳ ಬಳಿಕ ಫೈನಲ್ ತಲುಪಿರುವ RCB ಗೆಲ್ಲುವ ನಿರೀಕ್ಷೆ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಅಭಿಮಾನಿಗಳ ಉತ್ಸಾಹ ಅಪಾರವಾಗಿದ್ದು, ಗೆಲುವಿನ ಸಂಭ್ರಮಾಚರಣೆಗೆ ಸಿದ್ಧರಾಗಿದ್ದಾರೆ.

1 / 6
ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB) ತಂಡ ಐಪಿಎಲ್​ ಟ್ರೋಫಿಯನ್ನು ಎತ್ತಿಹಿಡಿಯಲು ಇನ್ನು ಒಂದು ಹೆಜ್ಜೆಯಷ್ಟೇ ಬಾಕಿ ಇದೆ. ಗುರುವಾರ (ಮೇ.29) ರಂದು ಮುಲ್ಲನ್ಪುರದಲ್ಲಿ ನಡೆದ ಮೊಲದ ಕ್ವಾಲಿಫೈಯರ್​ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ತಂಡವನ್ನು ಸೋಲಿಸಿ, ಫೈನಲ್​ಗೆ ಲಗ್ಗೆ ಇಟ್ಟಿದೆ. 2016ರ ನಂತರ ಆರ್​ಸಿಬಿ ಫೈನಲ್​ ತಲುಪಿದ್ದು ಇದೇ ಮೊದಲು.

2 / 6
ಬ್ಯಾಟಿಂಗ್​, ಬೌಲಿಂಗ್​ ಎಲ್ಲ ವಿಭಾಗದಲ್ಲೂ ಅಮೋಘ ಪ್ರದರ್ಶನ ನೀಡಿರುವ ಆರ್​ಸಿಬಿ ಈ ಬಾರಿ ಕಪ್​ ಗೆಲ್ಲುವ ನೆಚ್ಚಿನ ತಂಡವಾಗಿದೆ. 18 ವರ್ಷಗಳಿಂದ ಆರ್​ಸಿಬಿ ಕಪ್​ ಎತ್ತಿ ಹಿಡಿಯುವುದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಆರ್​ಸಿಬಿ ಮೊದಲ ಬಾರಿಗೆ ಐಪಿಎಸ್​ ಟ್ರೋಫಿಗೆ ಮುತ್ತಿಡುವ ನಿರೀಕ್ಷೆ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

3 / 6
ಸಾಂಸ್ಕೃತಿಕ ನಗರಿಯಲ್ಲಿ ಮೈಸೂರಿನಲ್ಲಿ ಆರ್​ಸಿಬಿ ಜೋಶ್ ಮುಗಿಲು ಮುಟ್ಟಿದೆ. ಆರ್‌ಸಿಬಿ ಟೀಂಗಾಗಿ ಮೈಸೂರಿನ  ದೀಪಕ್, ಶ್ರೇಯಸ್ ಹಾಗೂ ಪ್ರಣೀತ್ ಎಂಬುವರು ವಿಶೇಷ ಕಾರು ಸಿದ್ದಪಡಿಸಿದ್ದಾರೆ.

4 / 6
ಅಭಿಮಾನಿಗಳು ಕಾರನ್ನು ಸಂಪೂರ್ಣವಾಗಿ ಆರ್‌ಸಿಬಿಮಯ ಮಾಡಿದ್ದಾರೆ. ಕಾರಿನ ಮುಂಭಾಗದಲ್ಲಿ ಕನ್ನಡದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂತ ಬರೆಸಿದ್ದಾರೆ. ಒಂದು ಬದಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಇತರ ಆಟಗಾರರು ಹಾಗೂ ಅಭಿಮಾನಿಗಳ ಸ್ಟಿಕ್ಕರ್ ಅಂಟಿಸಿದ್ದಾರೆ. ಮತ್ತೊಂದು ಬದಿ ಐಪಿಎಲ್ ಟ್ರೋಪಿ ಗೆದ್ದ ಮಹಿಳಾ ತಂಡದ ಸ್ಟಿಕ್ಕರ್ ಅಂಟಿಸಿದ್ದಾರೆ.

5 / 6
ಹೆಬ್ಬಾಳು ಕೈಗಾರಿಕಾ ಪ್ರದೇಶದ ಕಾರ್‌ಮೆಡ್​ನಲ್ಲಿ ಸಿದ್ದವಾದ ವಿಶೇಷ ಕಾರನ್ನು ಚಾಮುಂಡಿ ಬೆಟ್ಟೆಕ್ಕೆ ತೆಗೆದುಕೊಂಡು ಹೋಗಿ ಪೂಜೆ ಮಾಡಿಸಿದ್ದಾರೆ. ನಂತರ, ತಾಯಿ ಚಾಮುಂಡೇಶ್ವರಿಗೆ ಆರ್​ಸಿಬಿ ಪರ ವಿಶೇಷ ಪೂಜೆ ಮಾಡಿಸಿದ್ದಾರೆ. ನಂತರ ಮೈಸೂರು ಹಾಗೂ ಬೆಂಗಳೂರಿನಲ್ಲಿ ಈ ಕಾರಿನಲ್ಲಿ ಸಂಚಾರ ಮಾಡಿ ಅಭಿಮಾನಿಗಳಲ್ಲಿ ಜೋಶ್ ತುಂಬಲಿದ್ದೇವೆ ಎಂದು ಹೇಳಿದ್ದಾರೆ.

6 / 6
ಆರ್​ಸಿಬಿ ಕಪ್​ ಗೆದ್ದರೆ ಅಭಿಮಾನಿಗಳ ಸಂಭ್ರಮಾಚರಣೆಗೆ ಮುಗಿಲು ಮುಟ್ಟುತ್ತದೆ. ಇದುವರೆಗೂ ಐಪಿಎಲ್​ನಲ್ಲಿ ಯಾರೂ ಮಾಡಿರದ ಸಂಭ್ರಮಾಚರಣೆಯನ್ನು ಆರ್​ಸಿಬಿ ಅಭಿಮಾನಿಗಳು ಮಾಡಲು ಸಿದ್ಧರಾಗಿದ್ದಾರೆ. ಕಳೆದ 18 ವರ್ಷಗಳಿಂದ ಈ ಸಲ ಕಪ್​ ನಮ್ದೆ ಎಂದು ಹೇಳುತ್ತಿರುವ ಆರ್​ಸಿಬಿ ಅಭಿಮಾನಿಗಳ ಘೋಷಣೆ ಈ ಬಾರಿ ನಿಜವಾಗಲು ಇನ್ನು ಒಂದು ಹೆಜ್ಜೆ ಮಾತ್ರ ಬಾಕಿ ಇದೆ. ಮಂಗಳವಾರ (ಜೂ.03) ರಾತ್ರಿ 7:30ಕ್ಕೆ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

Published On - 2:43 pm, Mon, 2 June 25