- Kannada News Photo gallery Redmi Note 12 Pro, iQOO Neo 6 and more check best gaming phones under rs 30000 in india kannada tech news
Gaming Smartphones: ಕಡಿಮೆ ಬೆಲೆಗೆ ಗೇಮಿಂಗ್ ಸ್ಮಾರ್ಟ್‌ಫೋನ್ ಬೇಕೇ?: ಇಲ್ಲಿದೆ 30,000 ರೂ. ಒಳಗಿನ ಬೆಸ್ಟ್ ಫೋನ್
Best Smartphones: ಗೇಮಿಂಗ್ ಸ್ಮಾರ್ಟ್ಫೋನ್ಗಳ ಬೆಲೆ ಹೆಚ್ಚು ಎಂಬ ಕಾಲ ಹೋಗಿದೆ. ಕಡಿಮೆ ಬೆಲೆಗೆವೇ ಮುಖ್ಯವಾಗಿ 30 ಸಾವಿರಕ್ಕಿಂತ ಕಡಿಮೆ ಬೆಲೆಗೆ ಬೆಸ್ಟ್ ಗೇಮಿಂಗ್ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಯಲ್ಲಿವೆ. ಈ ಪೈಕಿ 5 ಬೆಸ್ಟ್ ಫೋನ್ಗಳು ಇಲ್ಲಿದೆ ನೋಡಿ.
Updated on: Jan 19, 2023 | 2:18 PM

ಇಂದು ಭಾರತದಲ್ಲಿ ಅತ್ಯುತ್ತಮ ಸ್ಮಾರ್ಟ್ಫೋನ್ಗಳು (Smartphone) ಬಜೆಟ್ ಬೆಲೆಯಲ್ಲಿ ಮಾರಾಟ ಆಗುತ್ತಿದೆ. ಮಾರುಕಟ್ಟೆಯು ಅತ್ಯಂತ ಸೂಕ್ಷ್ಮವಾಗಿರುವಂತಹ ಭಾರತದಂತಹ ದೇಶದಲ್ಲಿ ಬೆಲೆಯ ವಿಚಾರವು ಬಹಳ ಮುಖ್ಯ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಆದರೆ, ಗೇಮಿಂಗ್ ಪ್ರಿಯರಿಗೆ ಈ ಬಜೆಟ್ ಬೆಲೆಯ ಸ್ಮಾರ್ಟ್ಫೋನ್ಗಳು ಸಾಕಾಗುವುದಿಲ್ಲ ಎಂಬ ಮಾತಿತ್ತು.

ಗೇಮಿಂಗ್ಗೆಂದು ದೊಡ್ಡ ಗಾತ್ರದ RAM, ಸ್ಟೋರೆಜ್ ಹೊಂದಿರುವ ಫೋನ್ ಹೆಚ್ಚಿನವ ಆಯ್ಕೆಯಾಗಿರುತ್ತದೆ. ಆದರೀಗ ಗೇಮಿಂಗ್ ಸ್ಮಾರ್ಟ್ಫೋನ್ಗಳ ಬೆಲೆ ಹೆಚ್ಚು ಎಂಬ ಕಾಲ ಹೋಗಿದೆ. ಕಡಿಮೆ ಬೆಲೆಗೆವೇ ಮುಖ್ಯವಾಗಿ 30 ಸಾವಿರಕ್ಕಿಂತ ಕಡಿಮೆ ಬೆಲೆಗೆ ಬೆಸ್ಟ್ ಗೇಮಿಂಗ್ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಯಲ್ಲಿವೆ. ಈ ಪೈಕಿ 5 ಬೆಸ್ಟ್ ಫೋನ್ಗಳು ಇಲ್ಲಿದೆ ನೋಡಿ.

ಇದೇ ತಿಂಗಳು ಜನವರಿಯಲ್ಲಿ ಬಿಡುಗಡೆ ಆದ ರೆಡ್ಮಿ ನೋಟ್ 12 ಪ್ರೊ ಸ್ಮಾರ್ಟ್ಫೋನ್ಗೆ ಗೇಮಿಂಗ್ ಪ್ರಿಯರು ಫಿದಾ ಆಗಿದ್ದಾರೆ. ಇದು 6.67 ಇಂಚಿನ ಅಮೊಲೊಡ್ ಫುಲ್ ಹೆಚ್ಡಿ+ ಡಿಸ್ ಪ್ಲೇ ಹೊಂದಿದ್ದು 120Hz ರಿಫ್ರೆಶ್ರೇಟ್ನಿಂದ ಕೂಡಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 1080 ಪ್ರೊಸೆಸರ್ ನೀಡಲಾಗಿದೆ. 5000mAh ಬ್ಯಾಟರಿ, 67W ಫಾಸ್ಟ್ ಚಾರ್ಜರ್ ಕೂಡ ಇದೆ. ಇದರ ಆರಂಭಿಕ ಬೆಲೆ 24,999 ರೂ. ಆಗಿದೆ.

27,999 ರೂ. ಬೆಲೆಯ ಐಕ್ಯೂ ನಿಯೋ 6 ಸ್ಮಾರ್ಟ್‌ಫೋನ್ ಕೂಡ ಅತ್ಯುತ್ತಮ ಗೇಮಿಂಗ್ ಫೋನಾಗಿದೆ. ಇದು 6.62 ಇಂಚಿನ ಅಮೊಲೊಡ್ ಡಿಸ್ ಪ್ಲೇ ಹೊಂದಿದ್ದು 120Hz ರಿಫ್ರೆಶ್ರೇಟ್ನಿಂದ ಕೂಡಿದೆ. ಸ್ನಾಪ್ಡ್ರಾಗನ್ 870 5G ಪ್ರೊಸೆಸರ್ ನೀಡಲಾಗಿದೆ. 4700mAh ಬ್ಯಾಟರಿ, 80W ಫಾಸ್ಟ್ ಚಾರ್ಜರ್ ಕೂಡ ಇದೆ. 64MP+8MP+2MP ಟ್ರಿಪಲ್ ಕ್ಯಾಮೆರಾ ಅಳವಡಿಸಲಾಗಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ S20 FE ಕೂಡ ಗೇಮಿಂಗ್ಗೆ ಹೇಳಿ ಮಾಡಿಸಿದ ಫೋನ್ ಆಗಿದೆ. ಇದರ ಬೆಲೆ 29,990 ರೂ. ಸಾಕಷ್ಟು ವಿಶೇಷತೆಯಿಂದ ಕೂಡಿರುವ ಈ ಫೋನ್ 6.5 ಇಂಚಿನ ಸೂಪರ್ ಅಮೊಲೊಡ್ ಡಿಸ್ ಪ್ಲೇ ಹೊಂದಿದ್ದು 120Hz ರಿಫ್ರೆಶ್ರೇಟ್ನಿಂದ ಕೂಡಿದೆ. ಸ್ನಾಪ್ಡ್ರಾಗನ್ 856 ಪ್ರೊಸೆಸರ್ ನೀಡಲಾಗಿದೆ. 4500mAh ಬ್ಯಾಟರಿ, 25W ಫಾಸ್ಟ್ ಚಾರ್ಜರ್ ಇದೆ.

ಪೋಕೋ F4 5G ಸ್ಮಾರ್ಟ್‌ಫೋನ್ ಸಾಧಾರಣ ಐಕ್ಯೂ ನಿಯೋ 6 ಮಾದರಿಯಲ್ಲೇ ಇದೆ. ಇದು 6.67 ಇಂಚಿನ E4 ಅಮೊಲೊಡ್ ಡಿಸ್ ಪ್ಲೇ ಹೊಂದಿದ್ದು 120Hz ರಿಫ್ರೆಶ್ರೇಟ್ನಿಂದ ಕೂಡಿದೆ. ಸ್ನಾಪ್ಡ್ರಾಗನ್ 870 5G ಪ್ರೊಸೆಸರ್ ನೀಡಲಾಗಿದೆ. 4500mAh ಬ್ಯಾಟರಿ, 67W ಫಾಸ್ಟ್ ಚಾರ್ಜರ್ ಕೂಡ ಇದೆ. 64MP+8MP+2MP ಟ್ರಿಪಲ್ ಕ್ಯಾಮೆರಾ ಅಳವಡಿಸಲಾಗಿದೆ. ಇದರ ಬೆಲೆ 27,999 ರೂ.

28,990 ರೂ. ಆರಂಭಿಕ ಬೆಲೆಯನ್ನು ಹೊಂದಿರುವ ಐಕ್ಯೂ 9 SE ಗೇಮಿಂಗ್ ಪ್ರಿಯರ ನೆಚ್ಚಿನ ಫೋನಾಗಿದೆ. ಇದು 6.6 ಇಂಚಿನ ಸೂಪರ್ ಅಮೊಲೊಡ್ ಡಿಸ್ ಪ್ಲೇ ಹೊಂದಿದ್ದು 120Hz ರಿಫ್ರೆಶ್ರೇಟ್ನಿಂದ ಕೂಡಿದೆ. ಬಲಿಷ್ಠವಾದ ಸ್ನಾಪ್ಡ್ರಾಗನ್ 888 ಪ್ರೊಸೆಸರ್ ನೀಡಲಾಗಿದೆ. 4500mAh ಬ್ಯಾಟರಿ, 66W ಫಾಸ್ಟ್ ಚಾರ್ಜರ್ ಕೂಡ ಇದೆ.




