Kannada News Photo gallery Rishab Shetty and Pragati Shetty celebrate Varamahalakshmi Festival 2023 with kids Ranvit and Raadhya
ಸಂಭ್ರಮದಿಂದ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ಕುಟುಂಬ; ಮುದ್ದಾಗಿವೆ ಫೋಟೋಗಳು
ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಮನೆಯಲ್ಲಿ ಕೂಡ ವರಮಹಾಲಕ್ಷ್ಮಿ ಹಬ್ಬವನ್ನು ಸೆಲೆಬ್ರೇಟ್ ಮಾಡಲಾಗಿದೆ. ಈ ಬಾರಿ ತುಂಬ ಖುಷಿಯಿಂದ ಲಕ್ಷ್ಮಿಯ ಪೂಜೆ ಮಾಡಲಾಗಿದೆ. ಆ ಫೋಟೋಗಳು ವೈರಲ್ ಆಗಿವೆ.
1 / 7
ಕಳೆದ ಶುಕ್ರವಾರ (ಆಗಸ್ಟ್ 25) ಎಲ್ಲೆಡೆ ಸಂಭ್ರಮದಿಂದ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಯಿತು. ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಬಹಳ ಉತ್ಸಾಹದಲ್ಲಿ ಈ ಹಬ್ಬವನ್ನು ಆಚರಿಸಿದ್ದಾರೆ.
2 / 7
ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಮನೆಯಲ್ಲಿ ಕೂಡ ವರಮಹಾಲಕ್ಷ್ಮಿ ಹಬ್ಬವನ್ನು ಸೆಲೆಬ್ರೇಟ್ ಮಾಡಲಾಗಿದೆ. ಈ ಬಾರಿ ತುಂಬ ಖುಷಿಯಿಂದ ಲಕ್ಷ್ಮಿಯ ಪೂಜೆ ಮಾಡಲಾಗಿದೆ. ಆ ಫೋಟೋಗಳು ವೈರಲ್ ಆಗಿವೆ.
3 / 7
ರಿಷಬ್ ಶೆಟ್ಟಿ ಅವರ ಪ್ರಗತಿ ಶೆಟ್ಟಿ ಅವರಿಗೆ ಹಬ್ಬಗಳ ಬಗ್ಗೆ ಉತ್ಸಾಹ ಇದೆ. ಎಲ್ಲ ಹಬ್ಬವನ್ನು ಅವರು ಬಹಳ ಖುಷಿಯಿಂದ ಆಚರಿಸುತ್ತಾರೆ. ಅದೇ ರೀತಿ ವರಮಹಾಲಕ್ಷ್ಮಿ ಹಬ್ಬದಲ್ಲಿ ಅವರು ಸಂಭ್ರಮದಿಂದ ಭಾಗಿ ಆಗಿದ್ದಾರೆ.
4 / 7
ಪ್ರಗತಿ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ದಂಪತಿಗೆ ಇಬ್ಬರು ಮಕ್ಕಳು. ಮಗನಿಗೆ ರಣ್ವಿತ್ ಶೆಟ್ಟಿ ಎಂದು ಹೆಸರು ಇಟ್ಟಿದ್ದಾರೆ. ಮಗಳಿಗೆ ರಾಧ್ಯ ಎಂದು ನಾಮಕರಣ ಮಾಡಲಾಗಿದೆ. ಈ ಮಕ್ಕಳು ಕೂಡ ಹಬ್ಬದ ಸಡಗರದಲ್ಲಿ ಮಿಂದೆದ್ದಿದ್ದಾರೆ.
5 / 7
ತಮ್ಮ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಹೇಗಿತ್ತು ಎಂಬುದನ್ನು ತಿಳಿಸಲು ಪ್ರಗತಿ ಶೆಟ್ಟಿ ಅವರು ಒಂದಷ್ಟು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವುಗಳಿಗೆ ಅಭಿಮಾನಿಗಳಿಂದ ಲೈಕ್ಸ್ ಸಿಕ್ಕಿದೆ.
6 / 7
‘ಕಳೆದ ಶುಭ ಶುಕ್ರವಾರ ಸಂಭ್ರಮದ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಿದ ಕ್ಷಣಗಳು. ಆ ತಾಯಿ, ಎಲ್ಲರಿಗೂ ಆಯುರಾರೋಗ್ಯ ಐಶ್ವರ್ಯವನ್ನು ನೀಡಿ ಹರಸಲಿ’ ಎಂದು ಎಲ್ಲರಿಗೂ ಪ್ರಗತಿ ಶೆಟ್ಟಿ ಅವರು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
7 / 7
‘ಕಾಂತಾರ’ ಸಿನಿಮಾಗೆ ರಿಷಬ್ ಶೆಟ್ಟಿ ಅವರು ನಿರ್ದೇಶನ ಮಾಡುವುದರ ಜೊತೆ ಮುಖ್ಯಭೂಮಿಕೆಯಲ್ಲಿ ನಟಿಸಿದರು. ಆ ಸಿನಿಮಾ 2022ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಯಿತು. ಈಗ ಆ ಚಿತ್ರಕ್ಕೆ ಪ್ರೀಕ್ವೆಲ್ ಸಿದ್ಧವಾಗುತ್ತಿದೆ.