
ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಸೋಶಿಯಲ್ ಮೀಡಿಯಾಗಳಲ್ಲಿ ಪತಿ ಹಾಗೂ ಮಕ್ಕಳೊಂದಿಗಿನ ಕ್ಯೂಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಪ್ರಗತಿ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿದ್ದು, ಹೊಸ ಹೊಸ ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಕಾಂತಾರದಲ್ಲಿ ತೊಟ್ಟಿದ್ದ ಹಳೆಯ ರೇಷ್ಮೇ ಸೀರೆಯ ಪೋಟೋಗಳನ್ನು ಹಂಚಿಕೊಂಡಿದ್ದರು.

ಇದೀಗಾ ಹಸಿರ ಮಧ್ಯೆ ಮಕ್ಕಳೊಂದಿಗೆ ರಿಷಬ್ ದಂಪತಿಗಳು ಪೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಪೋಟೋದಲ್ಲಿ ರಿಷಬ್, ಪತ್ನಿ ಪ್ರಗತಿ ಮತ್ತು ಮುದ್ದಾದ ಮಕ್ಕಳನ್ನು ಕಾಣಬಹುದು.

ಹಚ್ಚ ಹಸಿರಿನ ಹಳ್ಳಿ ಪ್ರದೇಶದಲ್ಲಿ ಹಳದಿ ಬಣ್ಣದ ಬಟ್ಟೆ ತೊಟ್ಟು ಮಿಂಚಿದ್ದಾರೆ.

ರಿಷಬ್ ಶೆಟ್ಟಿಯ ಮುದ್ದಾದ ಕುಟುಂಬವನ್ನು ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ನಗುಮೊಗದ ಈ ಮುದ್ದಾದ ಕುಟುಂಬದಲ್ಲಿ ನಗು ಹೀಗೆಯೇ ಶಾಶ್ವತವಾಗಿರಲಿ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.
Published On - 5:20 pm, Sun, 7 May 23