
ಕಾಂತಾರ ಸಿನಿಮಾದ ಸಣ್ಣ ಪಾತ್ರವೊಂದರಲ್ಲಿ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ನಟಿಸಿದ್ದಾರೆ.

ಸಿನಿಮಾದ ಆರಂಭದಲ್ಲಿ ಕಾಣಿಸಿಕೊಳ್ಳುವ ರಾಜನ ಪತ್ನಿ ಅಂದರೆ ರಾಣಿಯ ಪಾತ್ರದಲ್ಲಿ ಪ್ರಗತಿ ನಟಿಸಿದ್ದಾರೆ.

ಪ್ರಗತಿ ಶೆಟ್ಟಿ ಮಾತ್ರವೇ ಅಲ್ಲ, ರಿಷಬ್ ಶೆಟ್ಟಿಯ ಇಬ್ಬರು ಮಕ್ಕಳು ಸಹ ಕಾಂತಾರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ತಮ್ಮ ಪಾತ್ರದ ಚಿತ್ರಗಳನ್ನು ಪ್ರಗತಿ ಶೆಟ್ಟಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಈ ಸಿನಿಮಾ ತಮಗೆ ಬಹು ವಿಶೇಷ ಎಂದು ಬರೆದುಕೊಂಡಿದ್ದಾರೆ.

ಕಾಂತಾರ ಸಿನಿಮಾಕ್ಕೆ ವಸ್ತ್ರ ವಿನ್ಯಾಸಕಿಯಾಗಿಯೂ ಸಹ ಪ್ರಗತಿ ಶೆಟ್ಟಿ ಕಾರ್ಯ ನಿರ್ವಹಿಸಿದ್ದಾರೆ. ಕಾಂತಾರ 2 ನಲ್ಲೂ ಪ್ರಗತಿ ಶೆಟ್ಟಿ ನಟಿಸಲಿದ್ದಾರೆಯೇ? ಕಾದು ನೋಡಬೇಕು.