- Kannada News Photo gallery River Indie Electric Scooter Launched in Indai At Rs 1.25 Lakh 120km Range, check out all details
River Indie: ಬಜೆಟ್ ಬೆಲೆಯೊಂದಿಗೆ ಭರ್ಜರಿ ಮೈಲೇಜ್ ನೀಡುವ ರಿವರ್ ಇಂಡಿ ಇವಿ ಸ್ಕೂಟರ್ ಬಿಡುಗಡೆ
ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಕಂಪನಿ ರಿವರ್ ತನ್ನ ಬಹುನೀರಿಕ್ಷಿತ ಇಂಡಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಮಾದರಿಯು ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.
Updated on:Feb 24, 2023 | 7:37 PM

ರಿವರ್ ಕಂಪನಿಯು ಇಂಡಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಮಾದರಿಯು ಬೆಂಗಳೂರು ಎಕ್ಸ್ ಶೋರೂಂ ಪ್ರಕಾರ ರೂ.1.25 ಲಕ್ಷ ಬೆಲೆ ಹೊಂದಿದೆ.

ಹೊಸ ಇವಿ ಸ್ಕೂಟರ್ ಮಾದರಿಯಲ್ಲಿ ರಿವರ್ ಕಂಪನಿಯು IP67 ಮಾನದಂಡ ಪೂರೈಸಿರುವ 4kWh ಬ್ಯಾಟರಿ ಪ್ಯಾಕ್ ಬಳಕೆ ಮಾಡಿದ್ದು, ಇದು ಪ್ರತಿ ಚಾರ್ಜ್ ಗೆ ಗರಿಷ್ಠ 120 ಕಿ.ಮೀ ಮೈಲೇಜ್ ನೀಡುತ್ತದೆ.

ಇಂಡಿ ಇವಿ ಸ್ಕೂಟರ್ ನಲ್ಲಿರುವ ಬ್ಯಾಟರಿ ಪ್ಯಾಕ್ ಗರಿಷ್ಠ 5 ಗಂಟೆಗಳಲ್ಲಿ ಶೇ. 80 ರಷ್ಟು ಚಾರ್ಜ್ ಆಗಲಿದ್ದು, ಪೂರ್ತಿಯಾಗಿ ಚಾರ್ಜ್ ಆಗಲು ಗರಿಷ್ಠ 8 ಗಂಟೆಗಳ ಸಮಯಾವಕಾಶ ತೆಗೆದುಕೊಳ್ಳುತ್ತದೆ.

ಹೊಸ ಇವಿ ಸ್ಕೂಟರ್ ಮಾದರಿಯು 8.98 ಹಾರ್ಸ್ ಪವರ್ ಉತ್ಪಾದನೆಯೊಂದಿಗೆ ಪ್ರತಿ ಗಂಟೆಗೆ ಗರಿಷ್ಠ 90 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, 14 ಇಂಚಿನ ಅಲಾಯ್ ವ್ಹೀಲ್ ಜೊತೆಗೆ ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಸೌಲಭ್ಯ ನೀಡಲಾಗಿದೆ.

ಹೊಸ ಇವಿ ಸ್ಕೂಟರಿನಲ್ಲಿ ಗ್ರಾಹಕರ ಬೇಡಿಕೆಯೆಂತೆ ಇಕೋ, ರೈಡ್ ಜೊತೆಗೆ ರಶ್ ಎಂಬ ಮೂರು ರೈಡಿಂಗ್ ಮೋಡ್ ಜೋಡಣೆ ಮಾಡಲಾಗಿದ್ದು, ಇಕೋ ಮೋಡ್ ನಲ್ಲಿ ಗರಿಷ್ಠ ಮೈಲೇಜ್ ಪಡೆದುಕೊಳ್ಳಬಹುದಾಗಿದೆ.

ಇನ್ನು ಹೊಸ ಸ್ಕೂಟರಿನಲ್ಲಿ ರಿವರ್ ಕಂಪನಿಯು ಎಲ್ ಸಿಡಿ ಸ್ಕ್ರೀನ್ ಸೌಲಭ್ಯದೊಂದಿಗೆ ಕನೆಕ್ಟೆಡ್ ಫೀಚರ್ಸ್ ನೀಡಿದ್ದು, ಹಲವಾರು ಸೇಫ್ಟಿ ಫೀಚರ್ಸ್ ಗಳನ್ನ ನೀಡಲಾಗಿದೆ.

ಹಾಗೆಯೇ ಹೊಸ ಸ್ಕೂಟರಿನಲ್ಲಿ ಪುಟ್ ಮೇಲ್ಭಾಗದಲ್ಲಿ ಮತ್ತು ಅಂಡರ್ ಸೀಟ್ ನಲ್ಲಿ ಒಟ್ಟಾರೆಯಾಗಿ 55 ಲೀಟರ್ ಸಾಮರ್ಥ್ಯದ ಸ್ಟೊರೇಜ್ ಸ್ಪೇಸ್ ನೀಡಲಾಗಿದ್ದು, ಕ್ರ್ಯಾಶ್ ಗಾರ್ಡ್ ಸೌಲಭ್ಯ ಪ್ರಮುಖ ಆಕರ್ಷಣೆಯಾಗಿದೆ. ಇದರಲ್ಲಿ ಕಂಪನಿಯು ಐದು ವರ್ಷಗಳ ವಾರಂಟಿ ಘೋಷಣೆ ಮಾಡಿದ್ದು, ವಿವಿಧ ಮೂರು ಬಣ್ಣಗಳಲ್ಲಿ ಹೊಸ ಸ್ಕೂಟರ್ ಆಯ್ಕೆ ಮಾಡಬಹುದು.
Published On - 7:37 pm, Fri, 24 February 23



















