ಸಿನಿಮಾ ಕೆಲಸಗಳ ಬಿಡುವಿನಲ್ಲಿ ಫ್ಯಾಮಿಲಿಗೆ ಹೆಚ್ಚು ಸಮಯ ನೀಡುತ್ತಾರೆ ನಟ ಯಶ್. ಆ ಸಂದರ್ಭದ ಕೆಲವು ಫೋಟೋಗಳನ್ನು ರಾಧಿಕಾ ಪಂಡಿತ್ ಹಂಚಿಕೊಳ್ಳುತ್ತಾರೆ. ಪತಿಯ ಜತೆ ಸೆಲ್ಫಿ ತೆಗೆದುಕೊಳ್ಳಲು ರಾಧಿಕಾ ಕಷ್ಟಪಟ್ಟಿದ್ದಾರೆ.
ಪತ್ನಿ ರಾಧಿಕಾ ಜತೆಗಿನ ಸೆಲ್ಫಿಯಲ್ಲಿ ಯಶ್ ಮುಖ ಮುಚ್ಚಿಕೊಂಡಿರುವುದು ತುಂಬಾ ಫನ್ನಿ ಆಗಿದೆ. ಸದ್ಯ ಈ ಫೋಟೋ ಸಖತ್ ವೈರಲ್ ಆಗುತ್ತಿದೆ. ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಯಶ್ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಕುಟುಂಬದವರಿಗಾಗಿ ಅವರು ಹೆಚ್ಚು ಸಮಯ ಮೀಸಲಿಡುತ್ತಾರೆ. ನಟನೆಯಿಂದ ಸ್ವಲ್ಪ ದೂರ ಉಳಿದುಕೊಂಡಿರುವ ರಾಧಿಕಾ ಪಂಡಿತ್ ಅವರು ಸಂಸಾರದ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ.
ರಾಧಿಕಾ ಪಂಡಿತ್ ಮತ್ತು ಯಶ್ ದಾಂಪತ್ಯಕ್ಕೆ ಈಗ ಐದು ವರ್ಷ. 2016ರ ಡಿ.9ರಂದು ಈ ಜೋಡಿ ಹಸೆಮಣೆ ಏರಿತ್ತು. ಸ್ಯಾಂಡಲ್ವುಡ್ನಲ್ಲಿ ಯಶ್ ಮತ್ತು ರಾಧಿಕಾ ಬದುಕಿನ ಪಯಣ ಅನೇಕರಿಗೆ ಮಾದರಿ ಆಗಿದೆ.
‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಕೊನೇ ಹಂತದ ಕೆಲಸಗಳಲ್ಲಿ ಯಶ್ ತೊಡಗಿಕೊಂಡಿದ್ದಾರೆ. ಹಲವು ಪ್ರತಿಷ್ಠಿತ ಬ್ರ್ಯಾಂಡ್ಗಳಿಗೆ ಅವರು ರಾಯಭಾರಿ ಆಗಿದ್ದಾರೆ. ರಾಧಿಕಾ ಪಂಡಿತ್ ಆದಷ್ಟು ಬೇಗ ನಟನೆಗೆ ಮರಳಲಿ ಎಂದು ಅವರ ಫ್ಯಾನ್ಸ್ ಬಯಸುತ್ತಿದ್ದಾರೆ.