Updated on:Jun 27, 2023 | 8:24 PM
ಅಂಗನವಾಡಿಯ ರೂಪ್‌ನ ಸಿಮೆಂಟ್ ಕಳಚಿ ಚಿಕ್ಕಮಕ್ಕಳ ಮೇಲೆ ಬಿದ್ದ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಂದಿಕುರಳಿ ಗ್ರಾಮದಲ್ಲಿ ನಡೆದಿದೆ.
ಅದೃಷ್ಟವಶಾತ್ ಘಟನೆಯಲ್ಲಿ ಮಕ್ಕಳಿಗೆ ಯಾವುದೇ ಗಾಯಗಳಾಗಿಲ್ಲ. ಕಳೆದ ವಾರದಲ್ಲಿ ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಾಹಿತಿ ತಿಳಿದ ರಾಯಬಾಗ ಸಿಡಿಪಿಒ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನರೇಗಾ ಯೋಜನೆಯಡಿ ಸುಮಾರು 11.60 ಲಕ್ಷ ವೆಚ್ಚದಲ್ಲಿ ಕಳೆದ ವರ್ಷ ನಿರ್ಮಿಸಿ ಉದ್ಘಾಟನೆ ಮಾಡಲಾಗಿತ್ತು.
ಕಳೆದ ವರ್ಷ ಉದ್ಘಾಟನೆಗೊಂಡಿದ್ದ ಈ ಅಂಗನವಾಡಿ ಕೇಂದ್ರದ ರೂಫ್ನ ಸಿಮೆಂಟ್ ಕಳಚಿ ಬೀಳಲು ಆರಂಭವಾಗಿದೆ.
ನಂದಿಕುರಳಿ ಗ್ರಾಮದ ಪಿಡಿಒ ಎ.ಎ.ದಿಲಾವರ್ ವಿರುದ್ಧ ಅವ್ಯವಹಾರದ ಆರೋಪ ಕೇಳಿಬಂದಿದ್ದು, ಕಟ್ಟಡ ಸಂಪೂರ್ಣ ಕಳಪೆಮಟ್ಟದಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
Published On - 8:22 pm, Tue, 27 June 23