Royal Enfield: ಅತ್ಯಂತ ಕಡಿಮೆ ಬೆಲೆಯ ಹೊಸ ರಾಯಲ್ ಎನ್‌ಫೀಲ್ಡ್ ಬೈಕ್ ಬಿಡುಗಡೆಗೆ ಸಜ್ಜು..!
TV9kannada Web Team | Edited By: Zahir PY
Updated on: Jul 16, 2022 | 5:59 PM
Royal Enfield Hunter 350: ಹಂಟರ್ ಬೈಕ್ ಟೈಲ್‌ಲ್ಯಾಂಪ್‌ಗಳು, ಗ್ರಾಬ್ ಹ್ಯಾಂಡಲ್‌ಗಳು ಮತ್ತು ಮಡ್‌ಗಾರ್ಡ್‌ಗಳು ಸಹ ಈ ಹಿಂದಿಗಿಂತ ಎನ್‌ಫೀಲ್ಡ್ ಬುಲೆಟ್ಗಳಿಗಿಂತ ವಿಭಿನ್ನವಾಗಿವೆ.
Jul 16, 2022 | 5:59 PM
ರಾಯಲ್ ಎನ್‌ಫೀಲ್ಡ್ ತನ್ನ ಹೊಚ್ಚ ಹೊಸ 350cc ಬೈಕ್ ಅನ್ನು ಮುಂದಿನ ತಿಂಗಳು, ಅಂದರೆ ಆಗಸ್ಟ್ 2022 ರಲ್ಲಿ ಬಿಡುಗಡೆ ಮಾಡಲಿದೆ. ರಾಯಲ್ ಎನ್‌ಫೀಲ್ಡ್ ಹಂಟರ್ 350 ಹೆಸರಿನಲ್ಲಿ ಬಿಡುಗಡೆಯಾಗಲಿರುವ ಈ ಮೋಟಾರ್ ಸೈಕಲ್ ಈಗಾಗಲೇ ಬೈಕ್ ಪ್ರಿಯರ ಗಮನ ಸೆಳೆದಿದೆ. ಇದಾಗ್ಯೂ ಹೊಸ ಬೈಕ್ ಕುರಿತಾದ ಹೆಚ್ಚಿನ ಮಾಹಿತಿಯನ್ನು ರಾಯಲ್ ಎನ್‌ಫೀಲ್ಡ್ ಬಹಿರಂಗಪಡಿಸಿಲ್ಲ.
1 / 5
ಹಂಟರ್ 350 ಬಗ್ಗೆ ಕೆಲ ಮಾಹಿತಿಗಳು ಸೋರಿಕೆಯಾಗಿದ್ದು, ಈ ಮಾಹಿತಿ ಪ್ರಕಾರ ಈ ಬೈಕ್ ನಲ್ಲಿ 349ಸಿಸಿ ಎಂಜಿನ್ ಬಳಸಲಾಗಿದೆ. ಇನ್ನು ಇದು ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 20bhp ವರೆಗೆ ಪವರ್ ಉತ್ಪಾದಿಸುತ್ತದೆ. ಹಾಗೆಯೇ ಇದರ ಉದ್ದ 2055 ಮಿಮೀ ಮತ್ತು ಅಗಲ 800 ಮಿಮೀ. ಬೈಕ್‌ನ ವೀಲ್‌ಬೇಸ್ 1370 ಎಂಎಂ ಇರಲಿದೆ. ಅಂದರೆ ಪ್ರಸ್ತುತ ಇರುವ ರಾಯಲ್ ಎನ್‌ಫೀಲ್ಡ್ ಬೈಕ್ಗಳಲ್ಲೇ ಇದು ಅತ್ಯಂತ ಚಿಕ್ಕ ಬೈಕ್ ಆಗಿದೆ.
2 / 5
ಇನ್ನು ಹಂಟರ್ 350 ತೂಕವು 360 ಕೆಜಿ ಎಂದು ತಿಳಿದು ಬಂದಿದ್ದು, ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್ ಜೊತೆಗೆ ಡ್ಯುಯಲ್-ಚಾನೆಲ್ ABS (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ನೀಡಲಾಗಿದೆ. ಇದರ ಸಸ್ಪೆನ್ಷನ್ ಸೆಟಪ್ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಡ್ಯುಯಲ್ ರಿಯರ್ ಶಾಕ್ ಅಬ್ಸಾರ್ಬರ್‌ಗಳನ್ನು ಒಳಗೊಂಡಿರುತ್ತದೆ.
3 / 5
ಹಾಗೆಯೇ ಹಂಟರ್ ಬೈಕ್ ಟೈಲ್‌ಲ್ಯಾಂಪ್‌ಗಳು, ಗ್ರಾಬ್ ಹ್ಯಾಂಡಲ್‌ಗಳು ಮತ್ತು ಮಡ್‌ಗಾರ್ಡ್‌ಗಳು ಸಹ ಈ ಹಿಂದಿಗಿಂತ ಎನ್‌ಫೀಲ್ಡ್ ಬುಲೆಟ್ಗಳಿಗಿಂತ ವಿಭಿನ್ನವಾಗಿವೆ. ಇದರ ಹಿಂಭಾಗದಲ್ಲಿ ಸಸ್ಪೆನ್ಷನ್ ಯುನಿಟ್ ಹೊಂದಿರುತ್ತದೆ. ಹೊಸ 350cc ಬೈಕ್‌ನೊಂದಿಗೆ ಪ್ಲಾಸ್ಟಿಕ್ ಸೈಡ್ ಬಾಕ್ಸ್, ಫ್ಲೈ ಸ್ಕ್ರೀನ್ ಮತ್ತು ಬ್ಯಾಕ್‌ರೆಸ್ಟ್ ಸೇರಿದಂತೆ ಹಲವಾರು ಬಿಡಿಭಾಗಗಳನ್ನು ಸಹ ನೀಡಲಾಗುತ್ತದೆ.
4 / 5
ವಿಶೇಷ ಎಂದರೆ ಹಂಟರ್ 350ಸಿಸಿ ಬೈಕ್ ರಾಯಲ್ ಎನ್‌ಫೀಲ್ಡ್ ಕಂಪೆನಿಯ ಅತ್ಯಂತ ಕಡಿಮೆ ಬೆಲೆಯ ಬೈಕ್ ಎನ್ನಲಾಗಿದೆ. ಅಂದರೆ ಕಂಪೆನಿಯು ಬಿಡುಗಡೆ ಮಾಡಿರುವ ಅತ್ಯಂತ ಕಡಿಮೆಯ ಬೈಕ್ ಅಂದರೆ ರಾಯಲ್ ಎನ್‌ಫೀಲ್ಡ್ ಬುಲೆಟ್. ಅದಕ್ಕಿಂತಲೂ ಹೊಸ ಹಂಟರ್ ಬೆಲೆ 10 ರಿಂದ 20 ಸಾವಿರ ರೂ. ಕಡಿಮೆ ಇರಲಿದೆ. ಅಂದರೆ ರಾಯಲ್ ಎನ್‌ಫೀಲ್ಡ್ ಬೈಕ್ ಬೆಲೆ 1.2 ಲಕ್ಷ ರಿಂದ ರೂ 1.4 ಲಕ್ಷ ರೂ. ವ್ಯಾಪ್ತಿಯಲ್ಲಿ ಇರಲಿದೆ ಎಂದು ಅಂದಾಜಿಸಲಾಗಿದೆ.