
ರಾಜಮೌಳಿಯ ಆರ್ಆರ್ಆರ್ ಸಿನಿಮಾದಲ್ಲಿ ಬ್ರಿಟೀಶ್ ಪ್ರಜೆಯ ಪಾತ್ರದಲ್ಲಿ ನಟಿಸಿರುವ ಒಲಿವಿಯಾ ಮೋರಿಸ್.

ಈ ಬ್ರಿಟೀಷ್ ನಟಿ ಆರ್ಆರ್ಆರ್ ಸಿನಿಮಾದ ಜೊತೆಗೆ ಹೋಟೆಲ್ ಫೊರ್ಟಿಫಿನೋ ಹೆಸರಿನ ವೆಬ್ ಸರಣಿಯಲ್ಲಿಯೂ ನಟಿಸಿದ್ದಾರೆ.

ಆರ್ಆರ್ಆರ್ ಸಿನಿಮಾದ ಯಶಸ್ಸಿನ ಬಳಿಕ ಇದೀಗ ಒಲಿವಿಯಾಗೆ ದಿ ಹೆಡ್ ಹೆಸರಿನ ವೆಬ್ ಸರಣಿಯಲ್ಲಿ ನಟಿಸುವ ಅವಕಾಶ ದೊರೆತಿದೆ. ಇದು ಈಕೆ ನಟಿಸುತ್ತಿರುವ ಮೂರನೇ ಪ್ರಾಜೆಕ್ಟ್.

ಮುದ್ದು ಮುಖದ ಒಲಿವಿಯಾ ಮೊರಿಸ್ ಭಾರತದ ಸಿನಿಮಾಗಳಲ್ಲಿ ನಟಿಸುವಾಸೆ ಹೊಂದಿದ್ದಾರೆ. ಅವಕಾಶ ಸಿಗುತ್ತದೆಯೇ ಕಾದು ನೋಡಬೇಕಿದೆ.

ನಾಟು-ನಾಟು ಹಾಡಿನ ಚಿತ್ರೀಕರಣ ನನ್ನ ಈ ವರೆಗಿನ ಅತ್ಯುತ್ತಮ ಚಿತ್ರೀಕರಣದ ಅನುಭವ ಎಂದು ಒಲಿವಿಯಾ ಮೋರಿಸ್ ಹೇಳಿಕೊಂಡಿದ್ದಾರೆ.