ಭರ್ಜರಿ ಗಳಿಕೆ ಮಾಡಿದ ಆಲಿಯಾ ಭಟ್ ನಟನೆಯ ಟಾಪ್ ಐದು ಸಿನಿಮಾಗಳಿವು..
ಆಲಿಯಾ ಭಟ್ ಅವರು ಬಾಲಿವುಡ್ನ ಸ್ಟಾರ್ ನಟಿ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಅವರಿಂದಲೇ ಕೆಲವು ಸಿನಿಮಾಗಳು ಗೆದ್ದ ಉದಹಾರಣೆ ಇದೆ. ಇಂದು ಅವರಿಗೆ ಜನ್ಮದಿನ. ಈ ಸಂದರ್ಭದಲ್ಲಿ ಅವರ ಟಾಪ್ ಐದು ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.
1 / 6
ಆಲಿಯಾ ಭಟ್ ಅವರು ಬಾಲಿವುಡ್ನ ಸ್ಟಾರ್ ನಟಿ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಅವರಿಂದಲೇ ಕೆಲವು ಸಿನಿಮಾಗಳು ಗೆದ್ದ ಉದಹಾರಣೆ ಇದೆ. ಇಂದು (ಮಾರ್ಚ್ 15) ಅವರಿಗೆ ಜನ್ಮದಿನ. ಈ ಸಂದರ್ಭದಲ್ಲಿ ಅವರ ಟಾಪ್ ಐದು ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.
2 / 6
ಆರ್ಆರ್ಆರ್: ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಚಿತ್ರದಲ್ಲಿ ರಾಮ್ ಚರಣ್ಗೆ ಜೊತೆಯಾಗಿ ಆಲಿಯಾ ಭಟ್ ನಟಿಸಿದ್ದರು. ಪಾತ್ರ ಹೆಚ್ಚು ಹೊತ್ತು ತೆರೆಮೇಲೆ ಬರದೇ ಹೋದರೂ ಅವರ ಪಾತ್ರಕ್ಕೆ ಹೆಚ್ಚು ತೂಕ ಇತ್ತು. ಈ ಚಿತ್ರ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ.
3 / 6
ಬ್ರಹ್ಮಾಸ್ತ್ರ: 2022ರಲ್ಲಿ ರಿಲೀಸ್ ಆದ ‘ಬ್ರಹ್ಮಾಸ್ತ್ರ’ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಂಡಿತು. ನಿಜ ಜೀವನದ ಜೋಡಿ ರಣಬೀರ್ ಕಪೂರ್ ಹಾಗೂ ಆಲಿಯಾ ಒಟ್ಟಾಗಿ ಈ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ 275 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ.
4 / 6
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ: ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ಅವರದ್ದು ಹಿಟ್ ಜೋಡಿ. ಇವರು ಎರಡನೇ ಬಾರಿ ಒಟ್ಟಾಗಿ ನಟಿಸಿದ್ದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ 153 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಇವರ ಕಾಂಬಿನೇಷನ್ನಲ್ಲಿ ಬಂದ ‘ಗಲ್ಲಿ ಬಾಯ್’ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್ನಲ್ಲಿ 140 ಕೋಟಿ ರೂಪಾಯಿ ಬಿಸ್ನೆಸ್ ಮಾಡಿ ಗಮನ ಸೆಳೆದಿದೆ.
5 / 6
ಗಂಗೂಬಾಯಿ ಕಾಠಿಯಾವಾಡಿ: ಆಲಿಯಾ ಅವರು ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿ ಗಮನ ಸೆಳೆದಿದ್ದಾರೆ. ಈ ಚಿತ್ರ 129 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ.
6 / 6
ರಾಜಿ: ಆಲಿಯಾ ಭಟ್ ಅವರು ಉತ್ತಮವಾಗಿ ನಟನೆ ತೋರಿದ ಸಿನಿಮಗಾಳಲ್ಲಿ ‘ರಾಜಿ’ ಕೂಡ ಒಂದು. ಈ ಚಿತ್ರ 124 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ.