
ಬಾಲಿವುಡ್ ನಟ ಹೃತಿಕ್ ರೋಷನ್ ಇದೀಗ ಯುವ ನಟಿ ಸಬಾ ಆಜಾದ್ ಜತೆ ಸುತ್ತಾಡುತ್ತಿರುವುದು ಗುಟ್ಟಾಗಿಯೇನೂ ಉಳಿದಿಲ್ಲ. ಆದರೆ ಇದುವರೆಗೆ ಈರ್ವರೂ ಈಬಗ್ಗೆ ತುಟಿಕ್-ಪಿಟಿಕ್ ಎಂದಿಲ್ಲ.

ಶುಕ್ರವಾರದಂದು ಈ ರೂಮರ್ ಜೋಡಿ ಮತ್ತೆ ಜತೆಯಾಗಿ ಕಾಣಿಸಿಕೊಂಡಿದ್ದಾರೆ.

ಮುಂಬೈನ ಕೆಫೆಯೊಂದಕ್ಕೆ ಡಿನ್ನರ್ ಡೇಟ್ಗೆ ಹೃತಿಕ್ ಹಾಗೂ ಸಬಾ ಆಜಾದ್ ತೆರಳಿದ್ದರು.

ಅಲ್ಲಿಂದ ಮರಳುವ ವೇಳೆಗೆ ಈರ್ವರೂ ಕ್ಯಾಮೆರಾಗಳಿಗೆ ಸೆರೆಯಾಗಿದ್ದಾರೆ.

ಇದರಿಂದ ಕಸಿವಿಸಿಗೊಂಡ ಸಬಾ ತಮ್ಮ ತಲೆಗೂದಲಿನಿಂದ ಮುಖವನ್ನು ಮುಚ್ಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಗುರುತನ್ನು ಗುಪ್ತವಾಗಿಡಲು ಅವರು ಮುಂದಾಗಿದ್ದಾರೆ.

ಸಬಾ ಕೈಹಿಡಿದು ಹೃತಿಕ್ ಕರೆದೊಯ್ದಿದ್ದು ಕೂಡ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.

ಕೆಲ ದಿನಗಳ ಹಿಂದಷ್ಟೇ ಮೊದಲ ಬಾರಿಗೆ ಹೃತಿಕ್ ಹಾಗೂ ಸಬಾ ಜತೆಯಾಗಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಕಾಣಿಸಿಕೊಂಡಿದ್ದು, ಫೋಟೋಗಳು ವೈರಲ್ ಆಗಿವೆ.