ಅಣ್ಣನ ಮದುವೆಯಲ್ಲಿ ಮಿರಿ-ಮಿರಿ ಮಿಂಚಿದ ನಟಿ ಸಮಂತಾ, ಇಲ್ಲಿವೆ ಚಿತ್ರಗಳು
ನಟಿ ಸಮಂತಾ ಋತ್ ಪ್ರಭು ತನ್ನ ಸಹೋದರನ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ಸಹೋದರನ ಮದುವೆಯ ಚಿತ್ರಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿವೆ ನೋಡಿ ಸುಂದರ ಚಿತ್ರಗಳು.
1 / 7
ವರ್ಷಗಳು ಕಳೆದರೂ ನಟಿ ಸಮಂತಾ ವಿಚ್ಛೇದನದ ಸುದ್ದಿ ಇನ್ನೂ ತಣ್ಣಗಾಗಿಲ್ಲ. ಹೀಗಿರುವಾಗ ಇತ್ತೀಚೆಗೆ ಸಮಂತಾ ಮದುವೆ ಸಮಾರಾಂಭವೊಂದರಲ್ಲಿ ಪಾಲ್ಗೊಂಡಿದ್ದಾರೆ.
2 / 7
ಸಮಂತಾರ ಅಣ್ಣ ಡೇವಿಡ್ ವಿದೇಶದಲ್ಲಿ ವಿದೇಶಿ ಮಹಿಳೆಯೊಟ್ಟಿಗೆ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದು, ವಿವಾಹ ಕಾರ್ಯಕ್ರಮದಲ್ಲಿ ನಟಿ ಸಮಂತಾ ಭಾಗಿಯಾಗಿದ್ದರು.
3 / 7
ಮದುವೆ ಸಮಾರಂಭದಲ್ಲಿ ತಮ್ಮ ಕುಟುಂಬದ ಜೊತೆಗೆ ಸಮಯ ಕಳೆದು ಎಂಜಾಯ್ ಮಾಡಿದ್ದಾರೆ ಸಮಂತಾ. ತಾಯಿ, ತಂದೆ, ಸಹೋದರರು ಇನ್ನೂ ಕೆಲವು ಹತ್ತಿರದ ಬಂಧುಗಳು, ಗೆಳೆಯರೊಟ್ಟಿಗೆ ಸಮಂತಾ ಸಮಯ ಕಳೆದಿದ್ದಾರೆ.
4 / 7
ಸಮಂತಾರ ಸಹೋದರ ಡೇವಿಡ್ ಅಮೆರಿಕದಲ್ಲಿ ನೆಲೆಸಿದ್ದು, ಅಮೆರಿಕದ ವಿಸ್ಕಾನ್ಸಿನ್ ನಗರದ ಗ್ರೇಟ್ ಲೇಕ್ ಬಳಿ ಅಮೆರಿಕ ನಿವಾಸಿ ನಿಖೊಲೆ ಎಂಬುವರನ್ನು ವಿವಾಹವಾಗಿದ್ದಾರೆ.
5 / 7
ಸಮಂತಾಗೆ ಇಬ್ಬರು ಸಹೋದರರು ಡೇವಿಡ್ ಪ್ರಭು ಹಾಗೂ ಜಾನಥನ್ ಪ್ರಭು. ಇದೀಗ ಡೇವಿಡ್ ಪ್ರಭು ನಿಖೋಲೆ ಜೊತೆಗೆ ಯುಎಸ್ನಲ್ಲಿ ವಿವಾಹವಾಗಿದ್ದಾರೆ.
6 / 7
ಸಮಂತಾ, ಸಹೋದರನ ಮದುವೆಯ ಹಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮದುವಣಗಿತ್ತಿ ಜೊತೆಗೆ ಫ್ಲವರ್ ಗರ್ಲ್ ಆಗಿರುವ ತಮ್ಮ ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ.
7 / 7
ಸಮಂತಾ ತಮ್ಮ ತಾಯಿ, ತಂದೆ, ಸಹೋದರರು, ಅತ್ತಿಗೆ ಅವರ ಮಕ್ಕಳು ಗೆಳೆಯರು ಇನ್ನೂ ಹಲವು ಬಂಧುಗಳೊಟ್ಟಗೆ ಮದುವೆ ಸಮಾರಂಭವನ್ನು ಎಂಜಾಯ್ ಮಾಡಿದ್ದಾರೆ. ಚಿತ್ರಗಳು ಇಲ್ಲಿವೆ.