ಬೀದರ್​ ಜನತೆಯನ್ನು ರೋಮಾಂಚನಗೊಳಿಸಿದ ವಾಯುಸೇನೆ ಏರ್ ಶೋ, ಫೋಟೋಸ್​ ನೋಡಿ

ಬೀದರ್ ಜಿಲ್ಲೆಯ ಜನರ ಆಸೆಯಂತೆ ವಾಯು ಸೇನೆಯ ಶಕ್ತಿಯನ್ನು ಜನರಿಗೆ, ಮಕ್ಕಳಿಗೆ ತೋರಿಸುವ ಉದ್ದೇಶದಿಂದ ಬೀದರ್ ಕೋಟೆ ಆವರಣದಲ್ಲಿ ಬೀದರ್​ನ ಏರ್ ಬೇಸ್ ವತಿಯಿಂದ ಎರಡು ದಿನಗಳ ಕಾಲ ಏರ್ ಶೋ ಆಯೋಜನೆ ಮಾಡಲಾಗಿದೆ. ಶನಿವಾರ ನಡೆದ ಏರ್ ಶೋ ರೋಮಜನಕಾರಿಯಾಗಿತ್ತು. ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು.

ಸುರೇಶ ನಾಯಕ
| Updated By: ವಿವೇಕ ಬಿರಾದಾರ

Updated on: Sep 22, 2024 | 7:49 AM

Indian Air Force Conducted Two Days Airshow in Bidar, Kannada News

ಬೀದರ್​ನ ಕೋಟೆ ಆವರಣದಲ್ಲಿ ಶನಿವಾರ ನಡೆದ ಏರ್ ಶೋ ರೋಮಜನಕಾರಿಯಾಗಿತ್ತು. ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು. ಯುದ್ದ ವಿಮಾನಗಳು ಆಕಾಶದಲ್ಲಿ ಬಣ್ಣದಿಂದ ಬಿಡಿಸಿದ ತ್ರಿವರ್ಣ ಧ್ವಜ ನೋಡಲು ಎರಡು ಕಣ್ಣು ಸಾಲದು.

1 / 6
Indian Air Force Conducted Two Days Airshow in Bidar, Kannada News

ಬೀದರ್ ಜಿಲ್ಲೆಯ ಜನರ ಆಸೆಯಂತೆ ವಾಯು ಸೇನೆಯ ಶಕ್ತಿಯನ್ನು ಜನರಿಗೆ, ಮಕ್ಕಳಿಗೆ ತೋರಿಸುವ ಉದ್ದೇಶದಿಂದ ಬೀದರ್ ಕೋಟೆ ಆವರಣದಲ್ಲಿ ಬೀದರ್​ನ ಏರ್ ಬೇಸ್ ವತಿಯಿಂದ ಎರಡು ದಿನಗಳ ಕಾಲ ಏರ್ ಶೋ ಆಯೋಜನೆ ಮಾಡಲಾಗಿದೆ.

2 / 6
Indian Air Force Conducted Two Days Airshow in Bidar, Kannada News

ಶನಿವಾರ ನಡೆದ ಏರ್ ಶೋನಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು. 10 ನಿಮಿಷಗಳ ಕಾಲ ಸೂರ್ಯಕಿರಣ ಯುದ್ಧ ವಿಮಾನಗಳು ಆಕಾಶದಲ್ಲಿ ಹಾರಾಡುವ ಮೂಲಕ ಮಕ್ಕಳ ಹಾಗೂ ನೇರದಿದ್ದವರಲ್ಲಿ ರೋಮಾಚನ ಉಂಟುಮಾಡಿದವು.

3 / 6
Indian Air Force Conducted Two Days Airshow in Bidar, Kannada News

ಇದು ಎರಡುನೇ ಬಾರಿಗೆ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಮತ್ತು ಸೈನಿಕರ ಕುಟುಂಬಸ್ಥರಿಗೆ ಏರ್ ಶೋ ನೋಡಲು ಅವಕಾಶ ಕಲ್ಪಿಸಲಾಗಿದೆ. ಸೂರ್ಯ ಕಿರಣ ಯುದ್ಧ ವಿಮಾನಗಳು ಹೃದಯ ನಡುಗಿಸುವಂತಹ ಶಬ್ಧಮಾಡುತ್ತಾ ಮೇಲಕ್ಕೇರಿ ಓರೆಯಾದ ತಿರುವಿನೊಂದಿಗೆ ಮುಂದೆ ಸಾಗುವುದನ್ನು ಕಂಡು ಪ್ರೇಕ್ಷಕರು ರೋಮಾಂಚನಗೊಂಡರು.

4 / 6
Indian Air Force Conducted Two Days Airshow in Bidar, Kannada News

ಮತ್ತೆ ಕೆಲ ವಿಮಾನಗಳು ಮೇಲಕ್ಕೆ ಹೋಗಿ ತಲೆ ಕೆಳಗಾಗಿ ರಫ್​ ಅಂತ ಸ್ವಲ್ಪ ಕೆಳೆಗೆ ಬಂದು, ಪಲ್ಟಿ ಹೊಡೆದಿರುವುದನ್ನು ಕಂಡು ಜನರನ್ನು ಕಕ್ಕಾಬಿಕ್ಕಿಯಾಗಿಸಿದವು. ಲೋಹದ ಹಕ್ಕಿಗಳನ್ನು ಹತ್ತಿರದಿಂದ ನೋಡಿ, ಆಕಾಶದಲ್ಲಿ ಅದು ಹಾರಾಡುವುದನ್ನು ಕಂಡು ಹಾಗೂ ಅದನ್ನು ಚಾಲನೆ ಮಾಡಿದ ಪೈಲಟ್​ ಕಂಡು ವಿದ್ಯಾರ್ಥಿಗಳು ಖುಷಿ ಪಟ್ಟರು ನಾವೂ ಪೈಲೆಟ್ ಆಗಬೇಕೆಂಬ ಆಸೆ ವ್ಯಕ್ತಪಡಿಸಿದ್ದರು.

5 / 6
Indian Air Force Conducted Two Days Airshow in Bidar, Kannada News

ಶನಿವಾರ ಸಾವಿರಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಏರ್ ಶೋ ವೀಕ್ಷಿಸಿದರು. ವಾಯುಸೇನೆಯ ಯುದ್ಧ ವಿಮಾನಗಳ ಹಾರಾಟ ಕಂಡು ಖುಷಿ ಪಟ್ಟರು. ಸೂರ್ಯಕಿರಣ ಯುದ್ಧ ವಿಮಾನಗಳ ಶಕ್ತಿ ಪ್ರದರ್ಶನ ಎಲ್ಲೆರ ಗಮನ ಸೆಳೆದವು.

6 / 6
Follow us
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು