Samantha: ‘ನಾನು ಇದನ್ನು ಹೇಳಲೇ ಇಲ್ಲ’: ಮಾಜಿ ಗಂಡನ ವಿಷಯಕ್ಕೆ ಸ್ಪಷ್ಟನೆ ನೀಡಿದ ಸಮಂತಾ

Updated on: Apr 04, 2023 | 4:04 PM

Samantha Ruth Prabhu: ಸಮಂತಾ ಹೇಳದೇ ಇರುವ ಮಾತುಗಳನ್ನೆಲ್ಲ ಇಟ್ಟುಕೊಂಡ ಕೆಲವು ಮಾಧ್ಯಮಗಳು ಸುಳ್ಳು ಸುದ್ದಿ ಪ್ರಕಟಿಸಿವೆ. ಅದರ ಬಗ್ಗೆ ಸಮಂತಾ ಸ್ಪಷ್ಟನೆ ನೀಡಿದ್ದಾರೆ.

1 / 5
ನಟಿ ಸಮಂತಾ ರುತ್​ ಪ್ರಭು ಅವರು ನಾಗ ಚೈತನ್ಯ ಜೊತೆಗಿನ ದಾಂಪತ್ಯಕ್ಕೆ ವಿದಾಯ ಹೇಳಿದ ಬಳಿಕ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ. ವಿಚ್ಛೇದನ ಪಡೆದ ಬಳಿಕವೂ ಅವರ ಬಗ್ಗೆ ಗಾಸಿಪ್​ ಹಬ್ಬುವುದು ನಿಂತಿಲ್ಲ. ಆ ವಿಚಾರದ ಬಗ್ಗೆ ಸಮಂತಾ ಈಗ ಮೌನ ಮುರಿದಿದ್ದಾರೆ.

ನಟಿ ಸಮಂತಾ ರುತ್​ ಪ್ರಭು ಅವರು ನಾಗ ಚೈತನ್ಯ ಜೊತೆಗಿನ ದಾಂಪತ್ಯಕ್ಕೆ ವಿದಾಯ ಹೇಳಿದ ಬಳಿಕ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ. ವಿಚ್ಛೇದನ ಪಡೆದ ಬಳಿಕವೂ ಅವರ ಬಗ್ಗೆ ಗಾಸಿಪ್​ ಹಬ್ಬುವುದು ನಿಂತಿಲ್ಲ. ಆ ವಿಚಾರದ ಬಗ್ಗೆ ಸಮಂತಾ ಈಗ ಮೌನ ಮುರಿದಿದ್ದಾರೆ.

2 / 5

ನಾಗ ಚೈತನ್ಯ ಹಾಗೂ ನಟಿ ಶೋಭಿತಾ ಧುಲಿಪಾಲಾ ಅವರು ಡೇಟಿಂಗ್​ ಮಾಡುತ್ತಿರುವ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಅನೇಕ ಕಡೆಗಳಲ್ಲಿ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅವರಿಬ್ಬರ ಸಂಬಂಧದ ಬಗ್ಗೆ ಸಮಂತಾ ಮಾತಾಡಿದ್ದಾರೆ ಎಂದು ವರದಿ ಆಗಿತ್ತು.

3 / 5

ಮಾಜಿ ಗಂಡನ ಡೇಟಿಂಗ್​ ಬಗ್ಗೆ ಸಮಂತಾ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾದ ಸುದ್ದಿ ಸ್ವತಃ ಸಮಂತಾ ಕಣ್ಣಿಗೆ ಬಿದ್ದಿದೆ. ಅದನ್ನು ನೋಡಿ ಅವರಿಗೆ ಶಾಕ್​ ಆಗಿದೆ. ‘ಇದನ್ನು ನಾನು ಹೇಳಲೇ ಇಲ್ಲ’ ಎಂದು ಅವರೀಗ ಟ್ವಿಟರ್​ ಮೂಲಕ ಸ್ಪಷ್ಟನೆ ನೀಡಿದ್ದಾರೆ.

4 / 5

ಸಮಂತಾ ರುತ್​ ಪ್ರಭು ಮತ್ತು ನಾಗ ಚೈತನ್ಯ ಅವರು ಪ್ರೀತಿಸಿ ಮದುವೆ ಆದವರು. ಆದರೆ ಅವರ ದಾಂಪತ್ಯ ಜೀವನ ನಾಲ್ಕೇ ವರ್ಷಕ್ಕೆ ಅಂತ್ಯವಾಯಿತು. ವಿಚ್ಛೇದನ ಪಡೆದ ಬಳಿಕ ಸಮಂತಾ ಅವರು ಆ ವಿಚಾರದ ಬಗ್ಗೆ ಮೌನವಾಗಿದ್ದಾರೆ.

5 / 5

ನಾಗ ಚೈತನ್ಯ ಮತ್ತು ಸಮಂತಾ ನಡುವೆ ಯಾವ ವಿಚಾರಕ್ಕೆ ಕಿರಿಕ್​ ಆಯಿತು? ಅವರು ಡಿವೋರ್ಸ್​ ಪಡೆಯಲು ಅಸಲಿ ಕಾರಣ ಏನು ಎಂಬುದು ಇನ್ನೂ ಗುಟ್ಟಾಗಿಯೇ ಉಳಿದಿದೆ. ಹಳೇ ಘಟನೆಗಳನ್ನೆಲ್ಲ ಮರೆತು ಅವರು ಮುಂದೆ ಸಾಗುತ್ತಿದ್ದಾರೆ.

Published On - 4:04 pm, Tue, 4 April 23

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us