ನಟಿ ಸಮಂತಾ ಸಿನಿಮಾ ಚಿತ್ರೀಕರಣದಿಂದ ದೀರ್ಘ ಬ್ರೇಕ್ ಪಡೆದಿದ್ದಾರೆ.
ಬ್ಯುಸಿ ಶೆಡ್ಯೂಲ್ನಿಂದ ಮುಕ್ತಿ ಪಡೆದು ಪ್ರವಾಸದಲ್ಲಿ ಸಮಯ ಕಳೆದು ಬಂದಿದ್ದಾರೆ.
'ಖುಷಿ' ಸಿನಿಮಾದ ಚಿತ್ರೀಕರಣ ಮುಗಿಸಿ ಗೆಳತಿಯೊಟ್ಟಿಗೆ ವಿದೇಶ ಪ್ರವಾಸ ಮಾಡಿ ಬಂದಿದ್ದಾರೆ ಸಮಂತಾ.
ಪ್ರವಾಸದಿಂದ ಬಂದ ಕೂಡಲೇ ಹೊಸ ಫೋಟೊಶೂಟ್ಗಳನ್ನು ಸಮಂತಾ ಮಾಡಿಸಿದ್ದಾರೆ.
ಭಿನ್ನ ಉಡುಗೆಗಳನ್ನು ತೊಟ್ಟು ಫೋಟೊಶೂಟ್ ಮಾಡಿಸಿ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಹೊಸ ಚಿತ್ರಗಳಲ್ಲಿ ಸಮಂತಾ ಹಿಂದಿಗಿಂತಲೂ ಹೆಚ್ಚು ಅಂದವಾಗಿ, ಗ್ಲಾಮರಸ್ ಆಗಿ ಕಾಣುತ್ತಿದ್ದಾರೆ.
ಸಮಂತಾ ನಟನೆಯ 'ಖುಷಿ' ಸಿನಿಮಾ ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ನಾಯಕ.
ಸಮಂತಾರ ಹೊಸ ಚಿತ್ರಗಳನ್ನು ಅಭಿಮಾನಿಗಳು ಇಷ್ಟಪಟ್ಟಿದ್ದು, ಸಾವಿರಾರು ಲೈಕ್, ಕಮೆಂಟ್ಗಳು ಫೋಟೊಕ್ಕೆ ಬಂದಿವೆ.