ಕಳೆದ ಕೆಲವು ಸಮಯದ ಹಿಂದೆ ಸಮಂತಾ ವೈಯಕ್ತಿಕ ಕಾರಣಗಳಿಂದ ಸುದ್ದಿಯಾಗುತ್ತಿದ್ದರು. ಆದರೆ ಈಗ ಸಿನಿಮಾದ ಕಾರಣಗಳಿಂದ ಸಖತ್ ಸುದ್ದಿಯಲ್ಲಿದ್ದಾರೆ.
ಪ್ರಸ್ತುತ ಸ್ಯಾಮ್ ಬೋಲ್ಡ್ ಪಾತ್ರಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಜತೆಗೆ ಪಾತ್ರ ಪ್ರಧಾನ ಚಿತ್ರಗಳತ್ತ ಮಾತ್ರ ಗಮನ ಹರಿಸಿದ್ದಾರೆ.
ಇತ್ತೀಚೆಗಷ್ಟೇ ತಮಿಳಿನ ‘ಕಾಥುವಾಕುಲ ರೆಂಡು ಕಾದಲ್’ ಚಿತ್ರದಲ್ಲಿ ನಟಿಸಿದ್ದ ಸಮಂತಾ ಇದೀಗ ಮತ್ತೊಂದು ತಮಿಳಿನ ಚಿತ್ರವನ್ನು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಕಾಲಿವುಡ್ ಅಂಗಳದಿಂದ ಬಂದಿವೆ.
ಸ್ಟಾರ್ ನಟರೋರ್ವರೊಂದಿಗೆ ಸಮಂತಾ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ.
ವಿಜಯ್ ಅಭಿನಯದ ‘ದಳಪತಿ 67’ ಚಿತ್ರಕ್ಕೆ ಸಮಂತಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದಿವೆ ಕಾಲಿವುಡ್ ವರದಿಗಳು.
ಲೋಕೇಶ್ ಕನಗರಾಜ್ ಆ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಚಿತ್ರದಲ್ಲಿ ಸಮಂತಾ ನಟನೆಯ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ.
ಸಮಂತಾ ಈಗಾಗಲೇ ವಿಜಯ್ ಜತೆಗೆ ‘ಮರ್ಸಲ್’, ‘ಕತ್ತಿ’ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಇದಲ್ಲದೇ ಸಮಂತಾ ‘ಯಶೋದಾ’, ‘ಶಾಕುಂತಲಂ’, ‘ಖುಷಿ’ ಮೊದಲಾದ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.