
1. ನಟಸಾರ್ವಭೌಮ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಡೀ ಸ್ಯಾಂಡಲ್ವುಡ್ಗೆ ಆಗಸ್ಟ್ 29 ಕರಾಳ ದಿನವಾಗಿದೆ. ಏಕೆಂದರೆ ನಮ್ಮ ಪ್ರೀತಿಯ ಅಪ್ಪು ಹೃದಯಾಘಾತದಿಂದ ನಿಧನರಾಗಿದ್ದಾರೆ. ಜಿಮ್ನಲ್ಲಿ ವರ್ಕೌಟ್ ಮಾಡುವಾಗ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ವಿಕ್ರಂ ಆಸ್ಪತ್ರೆಗೆ ದಾಖಲಾದ ಪುನೀತ್ ರಾಜ್ಕುಮಾರ್ ತಮ್ಮ 46ರ ವಯಸ್ಸಿನಲ್ಲೇ ಕೋಟ್ಯಾಂತರ ಅಭಿಮಾನಿ ಬಳಗಕ್ಕೆ ವಿದಾಯ ಹೇಳಿದ್ದಾರೆ. ಬಾಲ ನಟನಾಗಿ ಸಿನಿಮಾರಂಗದಲ್ಲಿ ಹೆಸರು ಮಾಡಿದ್ದ ಅಪ್ಪ ಫ್ಯಾಮಿಲಿ ಆಡಿಯನ್ಸ್ಗೆ ತುಂಬಾ ಇಷ್ಟ. ಸಜ್ಜನ, ಹೃದಯವಂತಿಕೆ ಹೊಂದಿದ್ದ ಪುನೀತ್ ಈಗ ಕೇವಲ ನೆನೆಪು ಮಾತ್ರ.

2. ಸಂಜಾರಿ ವಿಜಯ್ ರಾಷ್ಟ್ರಪ್ರಶಸ್ತಿ ವಿಜೇತ, ಸ್ನೇಹ ಜೀವಿ ಸಂಜಾರಿ ವಿಜಯ್ ತಮ್ಮ 37ರ ವಯಸ್ಸಿನಲ್ಲಿ ರಸ್ತೆ ಅಪಘಾತದಲ್ಲಿ ಜೂನ್ 14ರ, 2021 ಮೃತಪಟ್ಟಿದ್ದರು. ಜೂನ್ 12ರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಂಚಾರಿ ವಿಜಯ್ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಬ್ರೈನ್ ಡೆಡ್ ಆಗಿತ್ತು. ಜೂನ್ 14ರ ರಾತ್ರಿ ವಿಜಯ್ ಅಂಗಾಂಗ ದಾನದ ಬಳಿಕ ವೈದ್ಯರು ಅಧಿಕೃತವಾಗಿ ಸಂಚಾರಿ ವಿಜಯ್ ಮೃತದ ಬಗ್ಗೆ ಘೋಷಣೆ ಮಾಡಿದ್ದರು.

3. ಚಿರಂಜೀವಿ ಸರ್ಜಾ 2020, ಜೂನ್ 7ರಂದು ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ತಮ್ಮ 39 ವರ್ಷ ವಯಸ್ಸಿನಲ್ಲಿ ಜೀವನದ ಪ್ರಯಾಣವನ್ನು ಅಂತಿಮಗೊಳಿಸಿದ್ರು. ಕನಸಿನಲ್ಲಿಯೂ ಯಾರು ಊಹಿಸಲಾಗದಂತೆ ದಿಢೀರನೆ ಇವರ ಸಾವಿನ ಸುದ್ದಿ ಅಭಿಮಾನಿಗಳಿಗೆ ಚಿಂತೆಗೆ ನೂಕಿತ್ತು.

4. ಬುಲೆಟ್ ಪ್ರಕಾಶ್ ಸ್ಯಾಂಡಲ್ವುಡ್ನ ಹಾಸ್ಯ ನಟ ಬುಲೆಟ್ ಪ್ರಕಾಶ್ ಲಿವರ್ ಹಾಗೂ ಕಿಡ್ನಿ ವೈಫಲ್ಯದಿಂದ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯ ಫೋರ್ಟೀಸ್ ಆಸ್ಪತ್ರೆಯಲ್ಲಿ ಏಪ್ರಿಲ್ 6, 2020ರಲ್ಲಿ ಮೃತಪಟ್ಟರು. ಇವರ ಕಾಮಿಡಿಗಳನ್ನು ನೋಡಿ ನಗದ ಜನರಿರಲಿಲ್ಲ. ಹಾಸ್ಯ ನಟನಾಗಿ ಅಭಿಮಾನಿಗಳಿಗೆ ರಂಜಿಸುತ್ತಿದ್ದ ಬುಲೆಟ್ ಪ್ರಕಾಶ್ 44 ವರ್ಷ ವಯಸ್ಸಿನಲ್ಲಿ ಹಾಸ್ಯ ಲೋಕಕ್ಕೆ ವಿದಾಯ ಮಾಡಿದ್ರು.

5. ಶಂಕರ್ ನಾಗ್ ಕನ್ನಡ ಚಿತ್ರರಂಗದಲ್ಲಿ ಯಾರು ಮರೆಯಲಾಗದ ಅಪರೂಪದ ಮಾಣಿಕ್ಯ ಎಂದರೆ ಶಂಕರ್ ನಾಗ್ ಎಂದು ಹೇಳಿದ್ರೆ ತಪ್ಪಾಗಲಾದರು. ಇವರು ಇದ್ದದ್ದು ಕೆಲವೇ ವರ್ಷವಾದರೂ ಸಿನಿಮಾ ಕ್ಷೇತ್ರದಲ್ಲಿ ಮಹಳಷ್ಟು ಸಾಧನೆ ಮಾಡಿದ್ದಾರೆ. 1990 ಸೆಪ್ಟೆಂಬರ್ 30ರಂದು ಪತ್ನಿ ಮತ್ತು ಪುತ್ರಿಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ದಾವಣಗೆರೆ ಬಳಿ ಅಪಘಾತವಾಗಿ ಮೃತಪಟ್ಟಿದ್ದರು. ತಮ್ಮ 35 ನೇ ವಯಸ್ಸಿನಲ್ಲೇ ಬದುಕು ಮುಗಿಸಿದ್ದರು.

6. ನಟ ಸುನೀಲ್ ಜುಲೈ 25, 1994ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಪ್ರತಿಭಾವಂತ ನಟ ಸುನೀಲ್ ಮರೆಯಾದರು. ತಮ್ಮ ಅದ್ಭುತ ಚಿತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ನಟ ಸುನೀಲ್ ಮತ್ತು ನಟಿ ಮಾಲಾಶ್ರೀ ಜೋಡಿ ಸೂಪರ್ ಹಿಟ್. ಇವರು ತಮ್ಮ 30ನೇ ವಯಸ್ಸಿನಲ್ಲಿ ಇಹ ಲೋಕ ತ್ಯಜಿಸಿದ್ರು.

7. ರಾಘವ ಉದಯ್ ಖಳನಟನ ಪಾತ್ರಗಳಿಂದ ಕನ್ನಡ ಚಿತ್ರ ರಂಗದಲ್ಲಿ ಹೆಸರು ಮಾಡಿದ್ದ ರಾಘವ ಉದಯ್ 2016 ನವೆಂಬರ್ 7 ರಂದು ತಿಪ್ಪಗೊಂಡನಹಳ್ಳಿ ಹಿನ್ನೀರಿನಲ್ಲಿ ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಸ್ನೇಹಿತ ಅನಿಲ್ ಜೊತೆ ನೀರಿನಲ್ಲಿ ಮುಳುಗಿ ನಿಧನರಾದರು. ಆಗ ಅವರಿಗೆ 32 ವಯಸ್ಸಾಗಿತ್ತು.

8. ಅನಿಲ್ ಖಳ ನಟನ ಪಾತ್ರಗಳಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಅನಿಲ್ ತನ್ನ 33ನೇ ವಯಸ್ಸಿನಲ್ಲಿ 2016 ನವೆಂಬರ್ 7 ರಂದು ತಿಪ್ಪಗೊಂಡನಹಳ್ಳಿ ಹಿನ್ನೀರಿನಲ್ಲಿ ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಸ್ನೇಹಿತ ರಾಘವ ಉದಯ್ ಜೊತೆ ನೀರಿನಲ್ಲಿ ಮುಳುಗಿ ನಿಧನರಾದರು.

9. ಧ್ರುವ ಶರ್ಮಾ ಕಿಚ್ಚ ಸುದೀಪ್ ರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಮತ್ತು ಕರ್ನಾಟಕ ಬುಲ್ಡೋಜರ್ ತಂಡದ ಆಟಗಾರನಾಗಿದ್ ಧ್ರುವ ಶರ್ಮಾ 35ನೇ ವಯಸ್ಸಿನಲ್ಲಿ 2017 ಅಗಸ್ಟ್ 1 ರಂದು ಹೃದಯಾಘಾತ ಮತ್ತು ಬಹುಅಂಗಾಂಗ ವೈಫಲ್ಯದಿಂದ ನಿಧನರಾದರು.

10. ನವೀನ್ ಮಯೂರ್ 2010 ಅಕ್ಟೋಬರ್ 3 ರಂದು ಜಾಂಡೀಸ್ನಿಂದಾಗಿ ನವೀನ್ ಮಯೂರ್ ತನ್ನ 32ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ್ರು. ನಿನಗೋಸ್ಕರ, ಲವಲವಿಕೆ, ನಲ್ಲ, ಸ್ಪರ್ಶ ಚಿತ್ರಗಳ ಮೂಲಕ ನವೀನ್ ಮಯೂರ್ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು.
Published On - 4:48 pm, Fri, 29 October 21