Updated on: Feb 19, 2022 | 4:30 PM
ಬೆಂಗಳೂರಿನ ವೈಟ್ ಫೀಲ್ಡ್ನಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ‘ಟಾಕ್ ಆಫ್ ದಿ ಟೌನ್-2022’ ಫ್ಯಾಷನ್ ವೀಕ್ ನಡೆಯಿತು. ಝಗಮಗಿಸುವ ವೇದಿಕೆಯಲ್ಲಿ ಮಾಡೆಲ್‌ಗಳು ಹೆಜ್ಜೆ ಹಾಕಿದರು.
ಈ ಫ್ಯಾಷನ್ ವೀಕ್‌ನಲ್ಲಿ 40 ಸೂಪರ್ ಮಾಡೆಲ್‌ಗಳ ಮಾದಕ ಕ್ಯಾಟ್‌ವಾಕ್ ಗಮನ ಸೆಳೆಯಿತು. ಅದ್ದೂರಿ ವೇದಿಕೆ, ಇಂಪಾದ ಮ್ಯೂಸಿಕ್, ಆ ಸಂಗೀತಕ್ಕೆ ತಕ್ಕಂತೆ ಸುಂದರಿಯರು ಮನಮೋಹಕವಾಗಿ ಕ್ಯಾಟ್ ವಾಕ್ ಮಾಡಿದರು.
ಫ್ಯಾಷನ್ ಪ್ರಿಯರನ್ನು ಮಂತ್ರ ಮುಗ್ಧಗೊಳಿಸುವಂತಹ ವಾತಾವರಣ ಅಲ್ಲಿ ನಿರ್ಮಾಣ ಆಗಿತ್ತು. ಬಗೆಬಗೆಯ ಉಡುಗೆಗಳನ್ನು ಧರಿಸಿದ ಮಾಡೆಲ್‌ಗಳು ಕಣ್ಮನ ಸೆಳೆದರು. ಶೋ ವೈಭವಕ್ಕೆ ಫೋಟೋಗಳು ಸಾಕ್ಷಿ ಆಗಿವೆ.
ಜಯಂತಿ ಬಲ್ಲಾಳ್, ರೇಷ್ಮಾ ಕುನ್ಹಿ, ಸಮಂತಾ ಅರ್ಪಣಾ, ಮಾನವ್, ವೈಲ್ಡ್‌ಕ್ಯಾಟ್ ಅವರಂತಹ ಪ್ರಖ್ಯಾತ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್‌ಗಳು ವಿನ್ಯಾಸಗೊಳಿಸಿದ ದೇಶಿ ಮತ್ತು ವೆಸ್ಟರ್ನ್ ಕಲ್ಚರ್ ಸೇರಿದಂತೆ ಹಲವು ಬಗೆಯ ನೂತನ ಶೈಲಿ ದಿರಿಸುಗಳು, ಆಭರಣಗಳನ್ನು ಧರಿಸಿ ಮಾಡೆಲ್‌ಗಳು ರ‍್ಯಾಂಪ್ ಮೇಲೆ ಬಳುಕುತ್ತಾ ಹೆಜ್ಜೆ ಹಾಕಿದರು.
ಸ್ಯಾಂಡಲ್‌ವುಡ್ ತಾರೆಯರಾದ ಶ್ವೇತಾ ಶ್ರೀವಾತ್ಸವ್, ಇತಿ ಆಚಾರ್ಯ, ಕಾರುಣ್ಯ ರಾಮ್, ನಂದಿತಾ ಶ್ವೇತಾ, ಕಾರ್ತಿಕ್ ಜಯರಾಮ್ ಮುಂತಾದವರು ವಿವಿಧ ಡಿಸೈನರ್ಗಳಿಗೆ ಶೋ ಸ್ಟಾಪರ್ ಆಗಿ ಹೆಜ್ಜೆ ಹಾಕಿದರು.
ನಟ-ನಟಿಯರ ಪಾಲ್ಗೊಳ್ಳುವಿಕೆಯಿಂದ ‘ಟಾಕ್ ಆಫ್ ದಿ ಟೌನ್ ಫ್ಯಾಷನ್ ಶೋ’ಗೆ ಮತ್ತಷ್ಟು ರಂಗು ತುಂಬಿತು. ‘ಟಗರು’ ಖ್ಯಾತಿಯ ಕಾಕ್ರೋಚ್ ಸುಧಿ ಸೇರಿದಂತೆ ಹಲವು ಸೆಲಿಬ್ರಿಟಿಗಳು ಈ ಫ್ಯಾಷನ್ ಶೋ ಅನ್ನು ಕಣ್ತುಂಬಿಕೊಂಡರು.
ಈ ವೇಳೆ ಮಾತನಾಡಿದ ನಟಿಯರಾದ ಕಾರುಣ್ಯ ರಾಮ್ ಹಾಗೂ ಇತಿ ಆಚಾರ್ಯ, ಮಹಿಳೆಯರೆಲ್ಲರೂ ಒಟ್ಟಿಗೆ ಕೂಡಿ ಈ ಫ್ಯಾಷನ್ ಶೋ ಆಯೋಜಿಸಿದ್ದು ಸಖತ್ ಖುಷಿ ತಂದಿದೆ. ಮಹಿಳೆಯರು ಮನಸ್ಸು ಮಾಡಿದರೆ ಎನ್ನೆಲ್ಲ ವಂಡರ್‌ಗಳನ್ನು ಮಾಡಬಹುದು ಎಂಬುದನ್ನು ಶೋನ ಆಯೋಜಕಿ ನಂದಿನಿ ನಾಗರಾಜ್ ಮಾಡಿ ತೋರಿಸಿದ್ದಾರೆ ಎಂದರು.