
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಯಾರೂ ಊಹಿಸದ ಹಾಗೂ ಯಾರೂ ಬಯಸದ ಟ್ವಿಸ್ಟ್ ಬಂದಿದೆ. ಸಂಜನಾ ಪಾತ್ರವನ್ನೇ ಕೊನೆ ಮಾಡಲು ನಿರ್ದೇಶಕರು ಮುಂದಾದಂತೆ ಇದೆ. ಇದು ಅನೇಕರಿಗೆ ಶಾಕಿಂಗ್ ಎನಿಸಿದೆ. ಫ್ಯಾನ್ಸ್ ಬೇಸರ ಹೊರಹಾಕಿದ್ದಾರೆ.

ಸ್ನೇಹಾ ಪಾತ್ರದಲ್ಲಿ ಸಂಜನಾ ನಟಿಸುತ್ತಿದ್ದಾರೆ. ಅವರು ಡಿಸಿ ಪಾತ್ರ ಮಾಡುತ್ತಿದ್ದಾರೆ. ಕನಸನ್ನು ಈಡೇರಿಸಿಕೊಂಡ ಬೆನ್ನಲ್ಲೇ ಅವರ ಪಾತ್ರವೇ ಕೊನೆ ಆಗಿದೆ ಎಂಬುದು ಬೇಸರದ ವಿಚಾರ. ಇತ್ತೀಚಿನ ಎಪಿಸೋಡ್ ಶಾಕಿಂಗ್ ಆಗಿದೆ.

ಸ್ನೇಹಾ ಕಾರಿನಲ್ಲಿ ಆಗಮಿಸುತ್ತಾ ಇರುತ್ತಾರೆ. ಈ ವೇಳೆ ಕಾರು ಅಪಘಾತ ಆಗುತ್ತದೆ. ಈ ವೇಳೆ ಸ್ನೇಹಾ ತಲೆಗೆ ಗಂಭೀರ ಗಾಯಗಳಾಗುತ್ತವೆ. ರಕ್ತ ಸೋರಿ ಹೋಗುತ್ತದೆ. ಯಾರೂ ಸಹಾಯಕ್ಕೂ ಬರುವುದಿಲ್ಲ. ನಂತರ ಹೇಗೋ ಸ್ನೇಹಾನ ಆಸ್ಪತ್ರೆಗೆ ಸೇರಿಸಲಾಗುತ್ತದೆ.

‘ನಿಮ್ಮ ಕಡೆಯವರನ್ನು ಬದುಕಿಸಲು ಸಾಧ್ಯವಾಗಿಲ್ಲ’ ಎಂದು ವೈದ್ಯರು ಕಂಠಿಗೆ ಹೇಳುತ್ತಾರೆ. ಈ ಮೂಲಕ ಸ್ನೇಹಾ ಮೃತಪಟ್ಟಿದ್ದನ್ನು ವೈದ್ಯರು ಖಚಿತ ಪಡಿಸಿದ್ದಾರೆ. ಈ ರೀತಿಯ ಟ್ವಿಸ್ಟ್ನ ಯಾರೂ ಊಹಿಸಿರಲಿಲ್ಲ.

ಸದ್ಯ ಸಂಜನಾ ಬುರ್ಲಿ ಫ್ಯಾನ್ಸ್ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬೇಸರ ಹೊರಹಾಕುತ್ತಿದ್ದಾರೆ. ಸ್ನೇಹಾ ಪಾತ್ರ ಕೊನೆ ಆಗಬಾರದು ಎಂದು ಕೋರುತ್ತಿದ್ದಾರೆ. ‘ಪ್ರಮುಖ ಪಾತ್ರವೇ ಕೊನೆ ಆದರೆ ಹೇಗೆ’ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.
Published On - 12:58 pm, Fri, 25 October 24