
ಸಾನ್ಯಾ ಐಯ್ಯರ್ ಅವರು ಬಿಗ್ ಬಾಸ್ ಮನೆಯಲ್ಲಿ ಗಮನ ಸೆಳೆಯುತ್ತಿದ್ದಾರೆ. ರೂಪೇಶ್ ಶೆಟ್ಟಿ ಜತೆಗಿನ ಒಡನಾಟದಿಂದಲೂ ಅವರು ಹೈಲೈಟ್ ಆಗುತ್ತಿದ್ದಾರೆ. ಈಗ ಸಾನ್ಯಾ ಐಯ್ಯರ್ ಅವರ ಕ್ಯೂಟ್ ಫೋಟೋಗಳು ವೈರಲ್ ಆಗಿವೆ.

ವೀಕೆಂಡ್ ವೇಳೆ ಸಾನ್ಯಾ ಐಯ್ಯರ್ ಅವರು ನೀಲಿ ಬಣ್ಣದ ಬಟ್ಟೆ ಧರಿಸಿ ಕಾಣಿಸಿಕೊಂಡಿದ್ದರು. ಈ ಫೋಟೋಗಳನ್ನು ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ.

ಇದಕ್ಕೆ ಫ್ಯಾನ್ಸ್ ಲೈಕ್ಸ್ ಒತ್ತುತ್ತಿದ್ದಾರೆ. ಇನ್ನೂ ಕೆಲವರಿಗೆ ಸಾನ್ಯಾ ಐಯ್ಯರ್ ಅವರ ಬಟ್ಟೆ ಇಷ್ಟವಾಗಿಲ್ಲ. ಈ ಬಗ್ಗೆ ಕೆಲವರು ಅಪಸ್ವರ ಎತ್ತಿದ್ದಾರೆ. ಈ ರೀತಿ ಡ್ರೆಸ್ ಹಾಕಬೇಡಿ ಎಂದು ಕೋರಿದ್ದಾರೆ.

‘ಬಿಗ್ ಬಾಸ್ ಕನ್ನಡ ಒಟಿಟಿ’ ಸೀಸನ್ಗೆ ಸಾನ್ಯಾ ಎಂಟ್ರಿ ಕೊಟ್ಟಿದ್ದರು. ಟಾಪ್ 4ರಲ್ಲಿ ಅವರೂ ಸ್ಥಾನ ಪಡೆದು ಟಿವಿ ಸೀಸನ್ಗೆ ಬಂದಿದ್ದಾರೆ.

ಸಾನ್ಯಾ ಐಯ್ಯರ್