ನಟಿ ಸಾನ್ಯಾ ಐಯ್ಯರ್ ಅವರು ‘ಬಿಗ್ ಬಾಸ್ ಒಟಿಟಿ’ ಹಾಗೂ ‘ಬಿಗ್ ಬಾಸ್’ ಟಿವಿ ಸೀಸನ್ ಎರಡರಲ್ಲೂ ಸಾಕಷ್ಟು ಗಮನ ಸೆಳೆದಿದ್ದಾರೆ. ಈಗ ಅವರು ಮನೆಯಿಂದ ಔಟ್ ಆಗಿದ್ದಾರೆ.
ಬಿಗ್ ಬಾಸ್ನಿಂದ ಸಾನ್ಯಾ ಐಯ್ಯರ್ ಅವರು ಔಟ್ ಆದ ಕೂಡಲೇ ರೂಪೇಶ್ ಶೆಟ್ಟಿ ಕಣ್ಣೀರು ಹಾಕಿದ್ದಾರೆ. ಇಬ್ಬರ ಮಧ್ಯೆ ಒಳ್ಳೆಯ ಒಡನಾಟ ಇತ್ತು.
ಬಿಗ್ ಬಾಸ್ ಒಟಿಟಿ ಸೀಸನ್ನಲ್ಲಿ ರೂಪೇಶ್ ಹಾಗೂ ಸಾನ್ಯಾ ಕ್ಲೋಸ್ ಆದರು. ಟಿವಿ ಸೀಸನ್ನಲ್ಲೂ ಇವರ ಒಡನಾಟ ಮುಂದುವರಿದಿತ್ತು.
ಬಿಗ್ ಬಾಸ್ ಟಿವಿ ಸೀಸನ್ನಿಂದ ಹೊರ ಬಂದ ಸಾನ್ಯಾ ಐಯ್ಯರ್ ಅವರು, ‘ಬದಲಾಗಲು ಸಾಧ್ಯವೇ ಇಲ್ಲ ರೂಪಿ. ಎಂದಿಗೂ ಆ ಮುದ್ದು ನಗುವಾಗಿ ನಿನ್ನಲ್ಲಿ ನಾನು. ಇದು ಅಂತರವಲ್ಲ, ನಮ್ಮ ಮನಸ್ಸು ಇನ್ನೂ ಹತ್ತಿರ’ ಎಂದು ಭಾವುಕರಾಗಿ ಪೋಸ್ಟ್ ಹಾಕಿದ್ದಾರೆ.
ಸಾನ್ಯಾ ಐಯ್ಯರ್ ಅವರು ಬಿಗ್ ಬಾಸ್ನಿಂದ ಹೊರ ಬಂದಿರುವುದು ಅನೇಕರಿಗೆ ಬೇಸರ ಮೂಡಿಸಿದೆ.