
ನಟಿ ಸಾರಾ ಅಲಿ ಖಾನ್ ಎರಡನೇ ಭಾರಿ ಕೇದಾರನಾಥ್ಗೆ ಭೇಟಿ ನೀಡಿದ್ದು ಹಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಅವರ ಮೊದಲ ಸಿನಿಮಾದ ಹೆಸರು ಕೇದಾರನಾಥ್, ಆ ಸಿನಿಮಾದಲ್ಲಿ ಸುಶಾಂತ್ ಸಿಂಗ್ ರಜಪೂತ್ ನಾಯಕ

ಸೈಫ್ ಅಲಿ ಖಾನ್-ಅಮೃತಾ ಸಿಂಗ್ ಪುತ್ರಿ ಸಾರಾ ಅಲಿ ಖಾನ್, ದೇವಾಲಯಗಳಿಗೆ ಆಗಾಗ್ಗೆ ಭೇಟಿ ನೀಡುತ್ತಲೇ ಇರುತ್ತಾರೆ.

ಕೇದಾರನಾಥ ದೇವಾಲಯಕ್ಕೆ ಸಾರಾ ಜೀವನದಲ್ಲಿ ಬಹಳ ಪ್ರಮುಖ ಸ್ಥಾನವಿದೆ. ಇಲ್ಲೇ ಮೊದಲ ಬಾರಿಗೆ ಅವರು ಸಿನಿಮಾಕ್ಕಾಗಿ ಕ್ಯಾಮೆರಾ ಎದುರಿಸಿದ್ದು.

ಕೆಲವು ಜನರಷ್ಟೆ ಇಲ್ಲಿಗೆ ಬರುವ ಅದೃಷ್ಟ ಪಡೆದಿರುತ್ತಾರೆ ನಾನು ಎರಡನೇ ಬಾರಿ ಇಲ್ಲಿಗೆ ಬರುತ್ತಿರುವುದನ್ನು ನನ್ನ ಪಾಲಿನ ಪುಣ್ಯವೆಂದು ಭಾವಿಸಿದ್ದೇನೆ ಎಂದಿದ್ದಾರೆ ಸಾರಾ ಅಲಿ ಖಾನ್.