
ಕಿರುತೆರೆ ನಟಿಯರು ಬಿಕಿನಿ ತೊಡೋದು ಸ್ವಲ್ಪ ಅಪರೂಪವೇ. ಈ ಸಾಲಿನಲ್ಲಿ ಕೆಲವೇ ಕೆಲವು ಹೀರೋಯಿನ್ಗಳು ಇದ್ದಾರೆ. ಈಗ ನಟಿ ಸಾರಾ ಅಣ್ಣಯ್ಯ ಅವರು ಬಿಕಿನಿ ತೊಟ್ಟು ಪಡ್ಡೆಗಳ ಕಣ್ಣು ಕುಕ್ಕಿದ್ದಾರೆ.

‘ಕನ್ನಡತಿ’ ಧಾರಾವಾಹಿಯಲ್ಲಿ ಸಾರಾ ಅಣ್ಣಯ್ಯ ಗಮನ ಸೆಳೆದಿದ್ದರು. ಈಗ ಅವರು ‘ಅಮೃತಧಾರೆ’ ಧಾರಾವಾಹಿಯಲ್ಲಿ ಸೈಕೋ ಲವರ್ ರೀತಿಯ ಪಾತ್ರ ಮಾಡಿದ್ದಾರೆ.

ಸಾರಾ ಆಗಾಗ ಟ್ರಿಪ್ ತೆರಳುತ್ತಾರೆ. ಈಗ ಅವರು ಸಮುದ್ರ ತೀರಕ್ಕೆ ತೆರಳಿದ್ದಾರೆ. ಅಲ್ಲಿ ಬಿಕಿನಿ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಸಾರಾ ಅಣ್ಣಯ್ಯ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಲಕ್ಷಾಂತರ ಮಂದಿ ಅವರನ್ನು ಹಿಂಬಾಲಿಸುತ್ತಾರೆ. ಎಲ್ಲರಿಗೂ ಈ ಫೋಟೋ ಇಷ್ಟವಾಗಿಲ್ಲ.

‘ಬಾಲಿವುಡ್ನವರೂ ಈ ರೀತಿಯ ಪೋಸ್ಟ್ ಹಾಕುವುದಿಲ್ಲ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಫೋಟೋಗೆ ಮೆಚ್ಚುಗೆ ಸೂಚಿಸಿದ್ದಾರೆ.

ಸಾರಾ ಅಣ್ಣಯ್ಯ ಅವರು ಈ ರೀತಿಯ ಕಮೆಂಟ್ಗಳಿಗೆ ತಲೆಕೆಡಿಸಿಕೊಂಡಿಲ್ಲ. ಟೀಕೆಗಳಿಗೆ ಭಯಪಟ್ಟು ಕಮೆಂಟ್ನ ಆಯ್ಕೆಯನ್ನು ಆಫ್ ಕೂಡ ಮಾಡಿಲ್ಲ.

ಸಾರಾ ಅವರು ಈ ಮೊದಲು ಕೂಡ ಈ ರೀತಿ ಬೋಲ್ಡ್ ಫೋಟೋ ಹಂಚಿಕೊಂಡು ಗಮನ ಸೆಳೆದಿದ್ದರು.