Updated on: Jul 02, 2022 | 3:39 PM
ಬಹುಭಾಷಾ ನಟಿ ಸಾಯೆಶಾ ಸೈಗಲ್ ಅವರು ಕಳೆದ ವರ್ಷ ಜುಲೈನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು. ಪುನೀತ್ ರಾಜ್ಕುಮಾರ್ ನಟನೆಯ ‘ಯುವರತ್ನ’ ಸಿನಿಮಾದಲ್ಲಿ ನಟಿಸುವ ಮೂಲಕ ಅವರು ಕನ್ನಡದ ಮಂದಿಗೂ ಪರಿಚಿತರಾದರು.
2015ರಲ್ಲಿ ತೆಲುಗಿನ ‘ಅಖಿಲ್’ ಸಿನಿಮಾ ಮೂಲಕ ಬಣ್ಣದ ಬದುಕಿಗೆ ಎಂಟ್ರಿ ನೀಡಿದ ಸಾಯೆಶಾ ಅವರು ತಮಿಳು, ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ. ಅವರ ವಯಸ್ಸು ಇನ್ನೂ 24.
ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇಟ್ಟುಕೊಂಡು, ಕೇವಲ 21ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅವರ ನಿರ್ಧಾರಕ್ಕೆ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದರು. ಚಿತ್ರರಂಗದಲ್ಲಿ ಬೇಡಿಕೆ ಇರುವಾಗಲೇ ತಾಯಿ ಆದರು. ಅಂದಹಾಗೆ, ಅವರ ಪತಿ, ನಟ ಆರ್ಯ ವಯಸ್ಸು 40.
ಮಗು ಜನಿಸಿದ ನಂತರ ಸಾಯೆಶಾ ಸಖತ್ ಫಿಟ್ ಆಗಿದ್ದಾರೆ. ಜಿಮ್ನಲ್ಲಿ ಸಾಕಷ್ಟು ಸಮಯ ಕಳೆಯುತ್ತಿದ್ದಾರೆ. ಹೀಗಾಗಿ, ಅವರು ಮೊದಲಿನ ಫಿಟ್ನೆಸ್ಗೆ ಮರಳಿದ್ದಾರೆ.
ಸಾಯೆಶಾ ಸೈಗಲ್