- Kannada News Photo gallery SBI Offering Concession On Interest Of Various Loans And Also Schemes For Deposits
State Bank Of India: ಸಾಲಕ್ಕೂ ಎಸ್ಬಿಐನಿಂದ ಆಫರ್ಗಳ ಸುಗ್ಗಿ; ಠೇವಣಿದಾರರು, ತೆರಿಗೆ ಪಾವತಿದಾರರಿಗೂ ಗುಡ್ ನ್ಯೂಸ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ವಿವಿಧ ಸಾಲಗಳ ಮೇಲೆ ಬಡ್ಡಿ ದರದಲ್ಲಿ ರಿಯಾಯಿತಿ ನೀಡಲಾಗುತ್ತಿದೆ. ಅಷ್ಟೇ ಅಲ್ಲ, ಠೇವಣಿಗಳ ಮೇಲೂ ಆಫರ್ಗಳಿವೆ.
Updated on: Aug 19, 2021 | 1:08 PM

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ (State Bank Of India) ಗ್ರಾಹಕರಿಗೆ ರೀಟೇಲ್ ಸಾಲ ಮತ್ತು ಠೇವಣಿಗಳ ಮೇಲೆ ಹೊಸ ಆಫರ್ಗಳನ್ನು ನೀಡಲಾಗುತ್ತಿದೆ. ಬ್ಯಾಂಕ್ ತನ್ನ ಎಲ್ಲ ಚಾನೆಲ್‌ಗಳಲ್ಲಿ ಗ್ರಾಹಕರಿಗೆ ಕಾರು ಸಾಲದ ಬಡ್ಡಿದರಗಳ ಮೇಲೆ ರಿಯಾಯಿತಿ ಹಾಗೂ ಶೇಕಡಾ 100ರಷ್ಟು ಪ್ರೊಸೆಸಿಂಗ್ ಶುಲ್ಕವನ್ನು ಮನ್ನಾ ಮಾಡುವುದಾಗಿ ಘೋಷಿಸಿದೆ. ಇದರ ಜೊತೆಗೆ ಇತರ ರಿಯಾಯಿತಿ ಬಡ್ಡಿದರಗಳನ್ನು ಘೋಷಣೆ ಮಾಡಿದೆ. ಎಸ್‌ಬಿಐನ ಎಂ.ಡಿ. (ರಿಟೇಲ್ ಮತ್ತು ಡಿಜಿಟಲ್ ಬ್ಯಾಂಕಿಂಗ್) ಸಿ.ಎಸ್. ಶೆಟ್ಟಿ ಮಾತನಾಡಿ, "ಹಬ್ಬದ ಋತುಗೆ ಮುಂಚಿತವಾಗಿ ನಮ್ಮ ಎಲ್ಲ ರೀಟೇಲ್ ಗ್ರಾಹಕರಿಗೆ ಆಫರ್ಗಳನ್ನು ಘೋಷಿಸಲು ಸಂತೋಷಿಸುತ್ತೇವೆ. ಈ ಆಫರ್ಗಳಿಂದಾಗಿ ಗ್ರಾಹಕರು ತಮ್ಮ ಸಾಲದಲ್ಲಿ ಹೆಚ್ಚು ಉಳಿತಾಯ ಮಾಡಲು ಸಹಾಯ ಆಗುತ್ತದೆ ಮತ್ತು ಅದೇ ಸಮಯದಲ್ಲಿ ಹಬ್ಬದ ಆಚರಣೆಗೆ ಇನ್ನಷ್ಟು ಮೌಲ್ಯ ನೀಡುತ್ತದೆ ಎಂದು ನಾವು ನಂಬುತ್ತೇವೆ. ನಮ್ಮ ಎಲ್ಲ ಗ್ರಾಹಕರಿಗೆ ಅತ್ಯುತ್ತಮ ಹಣಕಾಸು ಸಲ್ಯೂಷನ್ಗಳನ್ನು ನೀಡಲು ಮತ್ತು ಅವರ ಅಗತ್ಯ ಮತ್ತು ಅವಶ್ಯಕತೆಗಳನ್ನು ಪೂರೈಸಲು ಸಹಾಯ ಮಾಡುವುದೇ ಎಸ್‌ಬಿಐನ ನಿರಂತರ ಪ್ರಯತ್ನವಾಗಿದೆ," ಎಂದಿದ್ದಾರೆ.

ಎಸ್‌ಬಿಐ ಹೋಮ್ ಲೋನ್ ಬಡ್ಡಿ ದರಗಳು ಮತ್ತು ಪ್ರೊಸೆಸಿಂಗ್ ಫೀ ಎಸ್ಬಿಐನಿಂದ ಗ್ರಾಹಕರಿಗೆ ಹೋಮ್ ಲೋನ್ ಮೇಲೆ ಸಂಪೂರ್ಣ ಪ್ರೊಸೆಸಿಂಗ್ ಫೀ ಮನ್ನಾ ಮಾಡಲಾಗಿದೆ. ಮಹಿಳಾ ಗ್ರಾಹಕರಿಗೆ 5 ಬಿಪಿಎಸ್ ಬಡ್ಡಿ ರಿಯಾಯಿತಿ ಸಹ ಇದೆ. ಎಸ್‌ಬಿಐ ಯೋನೊ ಮೂಲಕ ಅರ್ಜಿ ಸಲ್ಲಿಸಿದರೆ ಇತರ ಗ್ರಾಹಕರು ಕೂಡ ಈ ರಿಯಾಯಿತಿ ಪಡೆಯಬಹುದು.

ತೀರಾ ಅಗತ್ಯ ಇದ್ದಲ್ಲಿ ಮಾತ್ರ ಸಾಲದ ಟಾಪ್ ಅಪ್ ಪಡೆಯಿರಿ. ಸಿಗುತ್ತದೆ ಎಂಬ ಕಾರಣಕ್ಕೆ ಸಾಲದ ಟಾಪ್ ಅಪ್ ಒಳ್ಳೆಯದಲ್ಲ ಎನ್ನುತ್ತಾರೆ.

ಬ್ಯಾಂಕ್ನ ಎಲ್ಲಾ ಚಾನೆಲ್‌ಗಳಲ್ಲಿ ಕಾರು ಸಾಲದ ಮೇಲೆ ಶೇಕಡಾ 100ರಷ್ಟು ಪ್ರೊಸೆಸಿಂಗ್ ಶುಲ್ಕ ಮನ್ನಾ ಅವಕಾಶವನ್ನು ಗ್ರಾಹಕರಿಗೆ ನೀಡುತ್ತಿದೆ. ಇದರ ಜತೆಗೆ ಗ್ರಾಹಕರು ತಮ್ಮ ಕಾರು ಸಾಲಕ್ಕಾಗಿ ಆನ್-ರೋಡ್ ದರದ ಶೇಕಡ 90 ರಷ್ಟು ಹಣಕಾಸು ಸೌಲಭ್ಯವನ್ನು ಪಡೆದುಕೊಳ್ಳಬಹುದು. ವಿಶೇಷ ರಿಯಾಯಿತಿ ವಿಷಯಕ್ಕೆ ಬಂದಲ್ಲಿ, ಎಸ್‌ಬಿಐ ಯೋನೋ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸುವವರಿಗೆ 25 ಬಿಪಿಎಸ್ ರಿಯಾಯಿತಿ ದೊರೆಯುತ್ತದೆ. ಆ ಮೂಲಕ ಹೊಸ ಕಾರು ಖರೀದಿಸಲು ಬಯಸುವ ಗ್ರಾಹಕರು ವಾರ್ಷಿಕ ಶೇ 7.5ರ ಬಡ್ಡಿದರದಲ್ಲೇ ಸಾಲ ಪಡೆಯಬಹುದು.

ಎಲ್ಲ ಚಾನೆಲ್‌ಗಳಲ್ಲಿ ಪ್ರೊಸೆಸಿಂಗ್ ಶುಲ್ಕದಲ್ಲಿ ಶೇ 100ರಷ್ಟು ಮನ್ನಾವನ್ನು ಬ್ಯಾಂಕ್ ಘೋಷಿಸಿದೆ. ಕೊವಿಡ್-19 ವಾರಿಯರ್ಸ್ಗೆ, ಅಂದರೆ ಮುಂಚೂಣಿಯಲ್ಲಿ ನಿಂತು ಕಾರ್ಯ ನಿಉರ್ವಹಿಸುತ್ತಿರುವವರಿಗೆ ವಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸುವಾಗ 50 ಬಿಪಿಎಸ್ ವಿಶೇಷ ಬಡ್ಡಿ ರಿಯಾಯಿತಿ ನೀಡಲಾಗುವುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಘೋಷಿಸಿದೆ. ಇದು ಶೀಘ್ರದಲ್ಲೇ ಕಾರು ಮತ್ತು ಚಿನ್ನದ ಸಾಲಗಳಿಗೂ ಲಭ್ಯ ಆಗುತ್ತದೆ.

ಈಗ, ರೀಟೇಲ್ ಠೇವಣಿದಾರರ ವಿಚಾರಕ್ಕೆ ಬಂದಲ್ಲಿ, ಬ್ಯಾಂಕ್ 'ಪ್ಲಾಟಿನಂ ಟರ್ಮ್ ಠೇವಣಿಗಳು' ಎಂಬ ಯೋಜನೆಯನ್ನು ಪರಿಚಯಿಸುತ್ತಿದೆ. 75 ವರ್ಷಗಳ ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸುವ ದ್ಯೋತಕವಾಗಿ ಇದನ್ನು ಆರಂಭಿಸಲಾಗಿದೆ. ಇದರ ಅಡಿಯಲ್ಲಿ ಬ್ಯಾಂಕ್ನ ಗ್ರಾಹಕರು 75 ದಿನಗಳು, 75 ವಾರಗಳು ಮತ್ತು 75 ತಿಂಗಳ ಅವಧಿಗಳ ಅವಧಿಯ ಠೇವಣಿಗಳ ಮೇಲೆ 15 ಬಿಪಿಎಸ್ ವರೆಗಿನ ಹೆಚ್ಚುವರಿ ಬಡ್ಡಿ ಪಡೆಯಬಹುದು. ಈ ಯೋಜನೆ ಆಗಸ್ಟ್ 15ರಿಂದ ಸೆಪ್ಟೆಂಬರ್ 14, 2021ರವರೆಗೆ ಇರುತ್ತದೆ.

ಎಸ್‌ಬಿಐ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಿಂದ ಮಾಡಿದ ಟ್ವೀಟ್‌ನಲ್ಲಿ, ಗ್ರಾಹಕರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಯೋನೊದಲ್ಲಿ ಉಚಿತವಾಗಿ ಸಲ್ಲಿಸಬಹುದು ಎಂದು ಹೇಳಿದೆ. ಟ್ವೀಟ್‌ನಲ್ಲಿ, "ಭಾರತದ 75ನೇ ಸ್ವಾತಂತ್ರ್ಯ ದಿನವನ್ನು ನಿಮಗಾಗಿ ವಿಶೇಷ ಕೊಡುಗೆಯೊಂದಿಗೆ ಎಸ್‌ಬಿಐ ಆಚರಿಸುತ್ತಿದೆ. ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ ಅನ್ನು Tax2winನೊಂದಿಗೆ ಯೋನೊದಲ್ಲಿ ಉಚಿತವಾಗಿ ಸಲ್ಲಿಸಿ!” ಎಂದು ತಿಳಿಸಿದೆ.









