AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಕಂದರಾಬಾದ್​ಗೆ ಏರ್​ಪೋರ್ಟ್ ಮಾದರಿಯ ಅತ್ಯಾಧುನಿಕ ರೈಲು ನಿಲ್ದಾಣ; ಶನಿವಾರ ಪ್ರಧಾನಿ ಮೋದಿ ಶಂಕುಸ್ಥಾಪನೆ

ತೆಲಂಗಾಣದ ಸಿಕಂದರಾಬಾದ್ ರೈಲು ನಿಲ್ದಾಣವನ್ನು 720 ಕೋಟಿ ರೂಪಾಯಿ ವೆಚ್ಚದಲ್ಲಿ ಮರು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದ್ದು, ಏರ್​​ಪೋರ್ಟ್ ಮಾದರಿಯ ಭವ್ಯ ನಿಲ್ದಾಣ ಮುಂದಿನ ದಿನಗಳಲ್ಲಿ ತಲೆಯೆತ್ತಲಿದೆ. ನೂತನ ರೈಲು ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ (ಏಪ್ರಿಲ್ 8) ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ರೈಲು ನಿಲ್ದಾಣದ ಮಾದರಿಯ ಚಿತ್ರಗಳು ಇಲ್ಲಿವೆ.

Ganapathi Sharma
|

Updated on: Apr 06, 2023 | 7:17 PM

Share
Secunderabad railway station to get airport like facelift PM Narendra Modi will lay the foundation stone on April 8

720 ಕೋಟಿ ರೂ. ವೆಚ್ಚದಲ್ಲಿ ತೆಲಂಗಾಣದ ಸಿಕಂದರಾಬಾದ್ ರೈಲು ನಿಲ್ದಾಣದ ಪುನರಾಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ವಿಶ್ವ ದರ್ಜೆಯ ಸೌಕರ್ಯಗಳು ಮತ್ತು ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ಐಕಾನಿಕ್ ಕಟ್ಟಡದೊಂದಿಗೆ ಬೃಹತ್ ಬದಲಾವಣೆಯೊಂದಿಗೆ ನೂತನ ರೈಲು ನಿಲ್ದಾಣ ನಿರ್ಮಾಣವಾಗಲಿದೆ.

1 / 7
Secunderabad railway station to get airport like facelift PM Narendra Modi will lay the foundation stone on April 8

ಏಪ್ರಿಲ್ 8 ರಂದು ಸಿಕಂದರಾಬಾದ್ ರೈಲು ನಿಲ್ದಾಣದ ಪುನರಾಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ಕೇಂದ್ರ ಸಚಿವ ಕಿಶನ್ ರೆಡ್ಡಿ ತಮ್ಮ ಟ್ವಿಟರ್ ಖಾತೆಯಲ್ಲಿ ಇತ್ತೀಚೆಗೆ ಮಾಹಿತಿ ನೀಡಿದ್ದರು.

2 / 7
Secunderabad railway station to get airport like facelift PM Narendra Modi will lay the foundation stone on April 8

ಪ್ರಯಾಣಿಕರ ಅನುಕೂಲಕ್ಕಾಗಿ ಸಾಕಷ್ಟು ಪಾರ್ಕಿಂಗ್ ಪ್ರದೇಶ, ಅನುಕೂಲಕರ ಪಿಕಪ್ ಮತ್ತು ಡ್ರಾಪ್-ಆಫ್ ಪ್ರದೇಶಗಳು ನೂತನ ರೈಲು ನಿಲ್ದಾಣದಲ್ಲಿ ಇರಲಿದ್ದು, ವ್ಯಾಪಾರ ಅವಕಾಶಗಳನ್ನೂ ಹೆಚ್ಚಿಸಲಿದೆ ಎಂದು ಸಚಿವರು ಹೇಳಿದ್ದಾರೆ.

3 / 7
Secunderabad railway station to get airport like facelift PM Narendra Modi will lay the foundation stone on April 8

ಪುನರಾಭಿವೃದ್ಧಿ ಯೋಜನೆಯಡಿ ಅಸ್ತಿತ್ವದಲ್ಲಿರುವ ನಿಲ್ದಾಣದ ಉತ್ತರ ಭಾಗದಲ್ಲಿ ಗ್ರೌಂಡ್+3 ಮಹಡಿಗಳೊಂದಿಗೆ (22,516 ಚದರ ಮೀಟರ್) ಹೊಸ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತದೆ ಮತ್ತು ದಕ್ಷಿಣ ಭಾಗದ ಕಟ್ಟಡವನ್ನು ಗ್ರೌಂಡ್+3 ಮಹಡಿಗಳೊಂದಿಗೆ (14,792 ಚದರ ಮೀಟರ್) ವಿಸ್ತರಣೆ ಮಾಡಲಾಗುತ್ತದೆ.

4 / 7
Secunderabad railway station to get airport like facelift PM Narendra Modi will lay the foundation stone on April 8

108 ಮೀಟರ್ ಅಗಲದ ಎರಡು ಅಂತಸ್ತಿನ ಸ್ಕೈ ಕಾನ್ಕೋರ್ಸ್ ಕೂಡ ನಿಲ್ದಾಣದಲ್ಲಿ ಇರಲಿವೆ. ಮೊದಲ ಅಂತಸ್ತಿನಲ್ಲಿ ಪ್ರಯಾಣಿಕರಿಗೆ ಸೇವೆ ಮತ್ತು ಎರಡನೇ ಹಂತವು ಮೇಲ್ಛಾವಣಿಯ ಪ್ಲಾಜಾವಾಗಿ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿವೆ.

5 / 7
Secunderabad railway station to get airport like facelift PM Narendra Modi will lay the foundation stone on April 8

ರೈಲು ನಿಲ್ದಾಣದ ಉತ್ತರ ಭಾಗದಲ್ಲಿ ಐದು ಹಂತದ ಪಾರ್ಕಿಂಗ್ ಮತ್ತು ದಕ್ಷಿಣ ಭಾಗದಲ್ಲಿ ಪ್ರತ್ಯೇಕ ಅಂಡರ್​ಗ್ರೌಂಡ್ ಪಾರ್ಕಿಂಗ್‌ ವ್ಯವಸ್ಥೆ ದೊರೆಯಲಿದೆ.

6 / 7
Secunderabad railway station to get airport like facelift PM Narendra Modi will lay the foundation stone on April 8

ಅಸ್ತಿತ್ವದಲ್ಲಿರುವ ಪ್ಲಾಟ್​ಫಾರ್ಮ್​ಗಳನ್ನು ಹೊಸ ನಿಲ್ದಾಣದ ಆಧುನಿಕತೆಗೆ ತಕ್ಕುದಾಗಿ ನವೀಕರಿಸಲಾಗುತ್ತದೆ. 5000 ಕೆವಿಪಿ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರವನ್ನೂ ನಿಲ್ದಾಣ ಹೊಂದಿರಲಿದೆ.

7 / 7