ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಂಡ ನಟಿ ಹೇಮಾ ಚೌಧರಿ; ದೇವರಿಗೆ ವಿಶೇಷ ಪೂಜೆ

|

Updated on: Oct 15, 2024 | 10:44 PM

ಕೆಲವು ತಿಂಗಳ ಹಿಂದೆ ಹಿರಿಯ ನಟಿ ಹೇಮಾ ಚೌಧರಿ ಅವರಿಗೆ ಗಂಭೀರ ಆರೋಗ್ಯ ಸಮಸ್ಯೆ ಎದುರಾಗಿತ್ತು. ಆಗ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಈಗ ಹೇಮಾ ಚೌಧರಿ ಅವರು ಚೇತರಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಪೂಜೆಯಲ್ಲಿ ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆಯರು ಭಾಗಿಯಾಗಿದ್ದರು.

1 / 5
ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರನ್ನು ರಂಜಿಸಿದ ನಟಿ ಹೇಮಾ ಚೌಧರಿ ಅವರು ಅನಾರೋಗ್ಯದ ಬಳಿಕ ಚೇತರಿಕೆ ಕಂಡಿದ್ದಾರೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ಅವರಿಗೆ ಬ್ರೇನ್ ಹೆಮರೇಜ್ ಆಗಿತ್ತು. ಆಗ ಸರ್ಜರಿಗೆ ಒಳಗಾಗಿದ್ದ ಅವರು ಈಗ ಚೇತರಿಸಿಕೊಂಡಿದ್ದಾರೆ.

2 / 5
ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಂಡ ಹೇಮಾ ಚೌಧರಿ ಅವರು ಇಂದು (ಅಕ್ಟೋಬರ್​ 15) ಬೆಂಗಳೂರಿನ ಜೆಪಿ ನಗರದ ಶ್ರೀನಿವಾಸ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಮ್ಮಿಕೊಂಡಿದ್ದರು. ಭಾರತಿ ವಿಷ್ಣುವರ್ಧನ್, ತಾರಾ ಅನುರಾಧಾ ಕೂಡ ಪೂಜೆಯಲ್ಲಿ ಪಾಲ್ಗೊಂಡರು.

3 / 5
ಪೂಜೆಯಲ್ಲಿ ಭಾಗಿಯಾದ ಬಳಿಕ ಹಿರಿಯ ನಟಿ ತಾರಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಕಮೆಂಟ್​ ಮೂಲಕ ಶುಭ ಹಾರೈಸಿದ್ದಾರೆ. ಹಿರಿಯ ನಟಿಯರನ್ನು ಒಟ್ಟಿಗೆ ನೋಡಿ ಖುಷಿಯಾಗಿದೆ.

4 / 5
‘ಎಲ್ಲರಿಗೂ ನಮಸ್ಕಾರ. ಶ್ರೀಮತಿ ಭಾರತಿ ವಿಷ್ಣುವರ್ಧನ್ ಅಮ್ಮ ಹಾಗೂ ಶ್ರೀಮತಿ ಹೇಮಾ ಚೌಧರಿ ಅಮ್ಮ ಇವರೊಂದಿಗೆ ಈ ದಿನ ಪವಿತ್ರ ದೇವಾಲಯದಲ್ಲಿ. ಈ ತಾಯಂದಿರ ಜೊತೆ ಸಮಯ ಕಳೆದದ್ದು ಏನೋ ಒಂದು ಥರ ಶಕ್ತಿ ಬಂದಂತೆ ಭಾಸವಾಯಿತು’ ಎಂದು ತಾರಾ ಪೋಸ್ಟ್ ಮಾಡಿದ್ದಾರೆ.

5 / 5
‘ಇಬ್ಬರು ತಾಯಂದಿರಿಗೂ ಮನಃಪೂರ್ವಕ ವಂದನೆಗಳು. ಸ್ವಾಮೀ ವೆಂಕಟರಮಣ ಭಗವಂತನಿಗೆ ಸಾಷ್ಟಾಂಗ ನಮಸ್ಕಾರಗಳು’ ಎಂದು ತಾರಾ ಅನುರಾಧಾ ಅವರು ಬರೆದುಕೊಂಡಿದ್ದಾರೆ. ಹೇಮಾ ಚೌಧರಿ ಅವರು ಚೇತರಿಸಿಕೊಂಡಿದ್ದಕ್ಕೆ ಅವರ ಅಭಿಮಾನಿಗಳಿಗೆ ಸಂತಸ ಆಗಿದೆ.