ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿರುವ ಹುಲಿ ಮತ್ತು ಸಿಂಹಧಾಮ ಅತ್ಯಂತ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಮೈಸೂರು, ಬನ್ನೇರುಘಟ್ಟ ಬಳಿಕ ಇದು ರಾಜ್ಯದಲ್ಲಿ ಹೆಸರುವಾಸಿಯಾಗಿದೆ. ಸದ್ಯ ಈ ಧಾಮದಲ್ಲಿ ವಿಜಯ್ ಹೆಸರಿನ ಹುಲಿ ಇಂದು ಕೊನೆಯುಸಿರೆಳೆದಿದೆ.
ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿದ್ದ ಏಕೈಕ ಹುಲಿ ವಿಜಯ್ (17) ಹೆಸರಿನ ಗಂಡು ಹುಲಿ ವಯೋ ಸಹಜ ಕಾರಣದಿಂದ ಒಂದು ತಿಂಗಳಿನಿಂದ ಹಸಿವಿನಿಂದ ಬಳಲುತ್ತಿತ್ತು.
ತನ್ನ ಹಿಂಭಾಗದ ಸ್ನಾಯುಗಳ ಸೆಳತ ಮತ್ತು ಹಸಿವಿನಿಂದ ಬಳಲುತ್ತಿದ್ದ ಹುಲಿ ವಿಜಯ್, ನಿನ್ನೆ ಮಂಗಳವಾರ ಕೊನೆಯುಸಿರೆಳೆದಿದ್ದಾನೆ. ವಿಜಯ್ ಸಾವಿನಿಂದ ಹುಲಿಗಳ ಸಂಖ್ಯೆ ನಾಲ್ಕಕ್ಕೆ ಇಳಿದಿದೆ.
ಕಳೆದ ಜ. 8 ರಂದು ಅಂಜನಿ ಎಂಬ 17 ವರ್ಷದ ಹುಲಿ ಸಾವನ್ನಪ್ಪಿತ್ತು. ಹುಲಿ ಮತ್ತು ಲಯನ್ ಸಫಾರಿಯಲ್ಲಿ ಹುಲಿಗಳ ಸಂಖ್ಯೆ ಕ್ಷೀಣಿಸುತ್ತಿದೆ.
ಸದ್ಯ ದಶಮಿ (17) ಸೀತಾ (16), ಪೂರ್ಣಿಮಾ (12) ಮತ್ತು ನಿವೇದಿತಾ (12) ನಾಲ್ಕು ಹುಲಿಗಳು ಸಫಾರಿಯಲ್ಲಿವೆ.