- Kannada News Photo gallery Niveditha Gowda Hit Backs to troll After Fans called her As average Bar Dancer Cinema News in Kannada
‘ನೀವು ಸಾಧಾರಣ ಬಾರ್ ಡ್ಯಾನ್ಸರ್’ ಎಂದವರಿಗೆ ಮುಟ್ಟಿನೋಡಿಕೊಳ್ಳೋ ಉತ್ತರ ಕೊಟ್ಟ ನಿವೇದಿತಾ ಗೌಡ
ನಿವೇದಿತಾ ಗೌಡ ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ವಿವಿಧ ರೀತಿಯ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಅವರು ಹಂಚಿಕೊಳ್ಳುತ್ತಾರೆ. ಇದಕ್ಕೆ ಬರೋ ಕಮೆಂಟ್ಗಳು ಒಂದೆರಡಲ್ಲ. ಇದರಲ್ಲಿ ನೆಗೆಟಿವ್ ವಿಚಾರಗಳೇ ಹೆಚ್ಚು. ಆದರೆ, ಇದನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತಿದ್ದಾರೆ ನಿವೇದಿತಾ.
Updated on:Feb 27, 2025 | 8:30 AM

ನಿವೇದಿತಾ ಗೌಡ ಅವರು ಚಂದನ್ ಶೆಟ್ಟಿ ಜೊತೆಗಿನ ವಿಚ್ಛೇದನದ ಬಳಿಕ ಸಾಕಷ್ಟು ಆ್ಯಕ್ಟೀವ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿವಿಧ ಬಗೆಯ ರೀಲ್ಸ್ ಹಂಚಿಕೊಳ್ಳುತ್ತಾರೆ. ಇದಕ್ಕೆ ಬರುವ ಕಮೆಂಟ್ಗಳು ಕೂಡ ಹೆಚ್ಚಿವೆ. ಇದಕ್ಕೆ ನಿವೇದಿತಾ ಹೆಚ್ಚು ತಲೆಕೆಡಿಸಿಕೊಂಡಿಲ್ಲ.

ನಿವೇದಿತಾ ಗೌಡ ಅವರು ಇತ್ತೀಚೆಗೆ ಶ್ರೀಲಂಕಾ ಟ್ರಿಪ್ ತೆರಳಿದ್ದರು. ಆಗ ಅವರು ಬಿಕಿನಿ ತೊಟ್ಟು ರೀಲ್ಸ್ ಮಾಡಿದ್ದೂ ಇದೆ. ಇದನ್ನು ಕೆಲವರು ಟೀಕೆ ಮಾಡಿದ್ದಾರೆ. ಈ ಟೀಕೆಗಳಿಗೆ ನಿವೇದಿತಾ ಗೌಡ ಅವರು ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ.

ನಿವೇದಿತಾ ಗೌಡ ಅವರು ಹಂಚಿಕೊಳ್ಳುವ ರೀಲ್ಸ್ಗೆ ಕೆಲವರು ‘ಸಾಧಾರಣ ಬಾರ್ ಡ್ಯಾನ್ಸರ್’ ಎಂದು ಹೇಳಿದ್ದರು. ಇದನ್ನು ನಿವೇದಿತಾ ಗಂಭೀರವಾಗಿ ಸ್ವೀಕರಿಸಿಲ್ಲ. ಹಾಗಂತ ಅವರು ಇದಕ್ಕೆ ಉತ್ತರ ಕೊಡದೆ ಸುಮ್ಮನೆ ಕುಳಿತುಕೊಂಡಿಲ್ಲ.

‘ನಾವು ಸಾಧಾರಣ ಬಾರ್ ಡ್ಯಾನ್ಸರ್ ಅಲ್ಲ, ಗುಡ್ ಬಾರ್ ಡ್ಯಾನ್ಸರ್’ ಎಂದು ಹೇಳಿದ್ದಾರೆ ನಿವೇದಿತಾ. ಈ ಮೂಲಕ ಉರಿಸೋಕೆ ಬಂದವರಿಗೆ ಉರಿಸಿ ಕಳುಹಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ. ಅನೇಕರು ನಿವೇದಿತಾ ಅವರನ್ನು ಬೆಂಬಲಿಸಿದ್ದಾರೆ.

ನಿವೇದಿತಾ ಗೌಡ ಅವರು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನಲ್ಲೂ ಅವರು ಬ್ಯುಸಿ ಇದ್ದಾರೆ. ನಿವೇದಿತಾ ಗೌಡ ಅವರ ಬೇಡಿಕೆ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ.
Published On - 8:28 am, Thu, 27 February 25
























