- Kannada News Photo gallery Shivamogga: 17-Year-Old Tiger name by Vijay Dies at Shivamogga Zoo and Safari, taja suddi
ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿದ್ದ ಏಕೈಕ ಗಂಡು ಹುಲಿರಾಯ ವಿಜಯ್ ಸಾವು
ಶಿವಮೊಗ್ಗದ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ 17 ವರ್ಷದ ಗಂಡು ಹುಲಿ ವಿಜಯ್ ವಯೋಸಹಜ ಕಾರಣಗಳಿಂದ ಮೃತಪಟ್ಟಿದೆ. ಒಂದು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವಿಜಯ್‌ನ ಸಾವಿನಿಂದ, ಈಗ ಸಫಾರಿಯಲ್ಲಿ ಕೇವಲ ನಾಲ್ಕು ಹುಲಿಗಳು ಉಳಿದಿವೆ. ಇದು ಹುಲಿಗಳ ಸಂಖ್ಯೆ ಕುಸಿತದ ಬಗ್ಗೆ ಕಳವಳ ಮೂಡಿಸಿದೆ.
Updated on: Feb 26, 2025 | 7:37 PM

ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿರುವ ಹುಲಿ ಮತ್ತು ಸಿಂಹಧಾಮ ಅತ್ಯಂತ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಮೈಸೂರು, ಬನ್ನೇರುಘಟ್ಟ ಬಳಿಕ ಇದು ರಾಜ್ಯದಲ್ಲಿ ಹೆಸರುವಾಸಿಯಾಗಿದೆ. ಸದ್ಯ ಈ ಧಾಮದಲ್ಲಿ ವಿಜಯ್ ಹೆಸರಿನ ಹುಲಿ ಇಂದು ಕೊನೆಯುಸಿರೆಳೆದಿದೆ.

ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿದ್ದ ಏಕೈಕ ಹುಲಿ ವಿಜಯ್ (17) ಹೆಸರಿನ ಗಂಡು ಹುಲಿ ವಯೋ ಸಹಜ ಕಾರಣದಿಂದ ಒಂದು ತಿಂಗಳಿನಿಂದ ಹಸಿವಿನಿಂದ ಬಳಲುತ್ತಿತ್ತು.

ತನ್ನ ಹಿಂಭಾಗದ ಸ್ನಾಯುಗಳ ಸೆಳತ ಮತ್ತು ಹಸಿವಿನಿಂದ ಬಳಲುತ್ತಿದ್ದ ಹುಲಿ ವಿಜಯ್, ನಿನ್ನೆ ಮಂಗಳವಾರ ಕೊನೆಯುಸಿರೆಳೆದಿದ್ದಾನೆ. ವಿಜಯ್ ಸಾವಿನಿಂದ ಹುಲಿಗಳ ಸಂಖ್ಯೆ ನಾಲ್ಕಕ್ಕೆ ಇಳಿದಿದೆ.

ಕಳೆದ ಜ. 8 ರಂದು ಅಂಜನಿ ಎಂಬ 17 ವರ್ಷದ ಹುಲಿ ಸಾವನ್ನಪ್ಪಿತ್ತು. ಹುಲಿ ಮತ್ತು ಲಯನ್ ಸಫಾರಿಯಲ್ಲಿ ಹುಲಿಗಳ ಸಂಖ್ಯೆ ಕ್ಷೀಣಿಸುತ್ತಿದೆ.

ಸದ್ಯ ದಶಮಿ (17) ಸೀತಾ (16), ಪೂರ್ಣಿಮಾ (12) ಮತ್ತು ನಿವೇದಿತಾ (12) ನಾಲ್ಕು ಹುಲಿಗಳು ಸಫಾರಿಯಲ್ಲಿವೆ.



















