- Kannada News Photo gallery Ragini Dwivedi spends quality time with Mohanlal Entertainment News in Kannada
ಮೋಹನ್ಲಾಲ್ ಜೊತೆ ಊಟ ಸವಿದ ರಾಗಿಣಿ ದ್ವಿವೇದಿ; ಕಾದಿದೆ ಸರ್ಪ್ರೈಸ್
ಮಾಲಿವುಡ್ ಸ್ಟಾರ್ ನಟ ಮೋಹನ್ ಲಾಲ್ ಅವರು ರಾಗಿಣಿ ದ್ವಿವೇದಿ ಹಾಗೂ ಅವರ ತಂಡಕ್ಕೆ ಔತಣ ಕೂಟ ಏರ್ಪಡಿಸಿದ್ದಾರೆ. ಮೋಹನ್ ಲಾಲ್ ತೋರಿಸಿದ ಪ್ರೀತಿಗೆ ರಾಗಿಣಿ ಫಿದಾ ಆಗಿದ್ದಾರೆ. ಆ ಸಂದರ್ಭದ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ಇಲ್ಲಿದೆ ಫೋಟೋ ಗ್ಯಾಲರಿ.
Updated on: Feb 25, 2025 | 8:48 PM

ನಟಿ ರಾಗಿಣಿ ದ್ವಿವೇದಿ ಅವರು ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಯ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಮಲಯಾಳಂ ಸೂಪರ್ ಸ್ಟಾರ್ ಮೋಹನ್ಲಾಲ್ ಜೊತೆ ನಟಿಸುವ ಅವಕಾಶ ಕೂಡ ರಾಗಿಣಿ ಅವರಿಗೆ ಸಿಕ್ಕಿದೆ.

ಈಗಾಗಲೇ ‘ವೃಷಭ’ ಸಿನಿಮಾದಲ್ಲಿ ಮೋಹನ್ಲಾಲ್ ಮತ್ತು ರಾಗಿಣಿ ದ್ವಿವೇದಿ ಅವರು ಒಟ್ಟಿಗೆ ಅಭಿನಯಿಸಿದ್ದಾರೆ. ಆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಇನ್ನೊಂದು ಸುದ್ದಿ ಕೂಡ ಕಾದಿದೆ.

ರಾಗಿಣಿ ದ್ವಿವೇದಿ ಮತ್ತು ಅವರ ಟೀಮ್ ಸದಸ್ಯರಿಗೆ ಮೋಹನ್ಲಾಲ್ ಅವರು ಔತಣ ನೀಡಿದ್ದಾರೆ. ಎಲ್ಲರೂ ಜೊತೆಯಾಗಿ ಕುಳಿತು ಬಗೆಬಗೆಯ ಆಹಾರ ಸವಿದಿದ್ದಾರೆ. ರಾಗಿಣಿ ಖುಷಿಯಿಂದ ಫೋಟೋ ಶೇರ್ ಮಾಡಿದ್ದಾರೆ.

‘ಅದು ದೊಡ್ಡ ಅಚ್ಚರಿಗಾಗಿ ಕಾದಿರಿ’ ಎಂದು ಅಭಿಮಾನಿಗಳಿಗೆ ರಾಗಿಣಿ ದ್ವಿವೇದಿ ಅವರು ಹೇಳಿದ್ದಾರೆ. ಆ ಮೂಲಕ ಅವರು ಕೌತುಕ ಮೂಡಿಸಿದ್ದಾರೆ. ಮತ್ತೊಮ್ಮೆ ಮೋಹನ್ಲಾಲ್ ಜೊತೆ ಅವರು ಕೈ ಜೋಡಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ರಾಗಿಣಿ ಅವರು ತುಂಬ ಆ್ಯಕ್ಟೀವ್ ಆಗಿರುತ್ತಾರೆ. ಅಭಿಮಾನಿಗಳಿಗೆ ತಮ್ಮ ದಿನಚರಿ ಬಗ್ಗೆ ಮಾಹಿತಿ ನೀಡುತ್ತಾರೆ. ಮೋಹನ್ಲಾಲ್ ಜತೆ ರಾಗಿಣಿ ನಟಿಸಿದ್ದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.



















