ಶಿವಮೊಗ್ಗದಲ್ಲಿ ವಿಶಿಷ್ಟ ಮಾವಿನ ಖಾದ್ಯಗಳ ಸ್ಪರ್ಧೆ: ಕೈಚಳಕ ತೋರಿಸಿದ ಮಹಿಳೆಯರು; ಇಲ್ಲಿವೆ ಫೋಟೋಸ್​

Edited By:

Updated on: Jun 04, 2026 | 5:26 PM

ಶಿವಮೊಗ್ಗದಲ್ಲಿ ನಡೆದ ಮಾವಿನಹಣ್ಣಿನ ಡೆಸರ್ಟ್ ಸ್ಪರ್ಧೆಯಲ್ಲಿ ಮಹಿಳೆಯರು ತಮ್ಮ ಅದ್ಭುತ ಕೈಚಳಕ ಪ್ರದರ್ಶಿಸಿದರು. ಮಾವಿನ ಲಡ್ಡು, ಮ್ಯಾಂಗೋ ಮೂಸ್, ಚೀಸ್ ಕೇಕ್ ಸೇರಿದಂತೆ ತರಹೇವಾರಿ ಖಾದ್ಯಗಳು ಎಲ್ಲರ ಕಣ್ಮನ ಸೆಳೆದವು. ಬಿವಿಐ ಮತ್ತು ಜೆಸಿಐ-ವಿವೇಕ್ ಸಂಸ್ಥೆಗಳು ಆಯೋಜಿಸಿದ್ದ ಈ ಸ್ಪರ್ಧೆ, ಆಹಾರ ಪ್ರಿಯರಿಗೆ ಹೊಸ ಅನುಭವ ನೀಡಿದೆ. ಫೋಟೋಸ್​ ಇಲ್ಲಿವೆ ನೋಡಿ.

1 / 6
ಶಿವಮೊಗ್ಗದ ಬಿವಿಐ ಹಾಗೂ ಜೆಸಿಐ-ವಿವೇಕ್ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾವಿನಹಣ್ಣಿನ ವಿಶೇಷ ಡೆಸರ್ಟ್ ಸ್ಪರ್ಧೆಯು ಸಾರ್ವಜನಿಕರ ಗಮನ ಸೆಳೆಯಿತು. ವಿವಿಧ ವಯೋಮಾನದ ಮಹಿಳೆಯರು ಅತ್ಯಂತ ಉತ್ಸಾಹದಿಂದ ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಕಳೆ ತುಂಬಿದರು.

ಶಿವಮೊಗ್ಗದ ಬಿವಿಐ ಹಾಗೂ ಜೆಸಿಐ-ವಿವೇಕ್ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾವಿನಹಣ್ಣಿನ ವಿಶೇಷ ಡೆಸರ್ಟ್ ಸ್ಪರ್ಧೆಯು ಸಾರ್ವಜನಿಕರ ಗಮನ ಸೆಳೆಯಿತು. ವಿವಿಧ ವಯೋಮಾನದ ಮಹಿಳೆಯರು ಅತ್ಯಂತ ಉತ್ಸಾಹದಿಂದ ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಕಳೆ ತುಂಬಿದರು.

2 / 6

ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಲಲನೆಯರು ಸಾಂಪ್ರದಾಯಿಕ ಉಡುಗೆಗಳಲ್ಲಿ ಕಂಗೊಳಿಸಿದರು. ಕೇವಲ ವೈಯಕ್ತಿಕ ಅಲಂಕಾರಕ್ಕಷ್ಟೇ ಸೀಮಿತವಾಗದೆ, ತಾವು ಸಿದ್ಧಪಡಿಸಿದ ಖಾದ್ಯಗಳನ್ನು ಅಷ್ಟೇ ಸುಂದರವಾಗಿ ಅಲಂಕರಿಸಿ ಪ್ರದರ್ಶನಕ್ಕಿಟ್ಟಿದ್ದು ನೋಡುಗರ ಕಣ್ಮನ ಸೆಳೆಯಿತು. ಮಾವಿನ ಹಣ್ಣಿನ ವೈವಿಧ್ಯತೆ ಇಲ್ಲಿ ಅನಾವರಣಗೊಂಡಿತು.

3 / 6

ಮನೆಯಿಂದಲೇ ಸಿದ್ಧಪಡಿಸಿಕೊಂಡು ತಂದಿದ್ದ ಮಾವಿನ ಲಡ್ಡು, ಮ್ಯಾಂಗೋ ಮೂಸ್, ಚೀಸ್ ಕೇಕ್ ಹಾಗೂ ಶಾಯಿ ಟುಕ್ರಾ ಅಂತಹ ಹೊಸ ಬಗೆಯ ಖಾದ್ಯಗಳು ಕಂಡುಬಂದವು. ಮ್ಯಾಂಗೋ ಹೋಳಿಗೆ ಮತ್ತು ಗೋಲ್ಡೆನ್ ಪುಡ್ಡಿಂಗ್‌ಗಳಂತಹ ತರಹೇವಾರಿ ಸಿಹಿ ಪದಾರ್ಥಗಳು ಆಹಾರ ಪ್ರಿಯರ ಬಾಯಿರುಚಿಯನ್ನು ಹೆಚ್ಚಿಸಿದವು.

4 / 6

ಮಹಿಳೆಯರು ತಮ್ಮ ಕೈಚಳಕದ ಮೂಲಕ ಮಾವಿನ ಹಣ್ಣಿನಲ್ಲಿ ಏನೆಲ್ಲಾ ಅದ್ಭುತ ಖಾದ್ಯಗಳನ್ನು ತಯಾರಿಸಬಹುದು ಎಂಬುದನ್ನು ಸಾಬೀತುಪಡಿಸಿದರು. ಪ್ರತಿಯೊಂದು ಖಾದ್ಯವೂ ವಿಶಿಷ್ಟ ರುಚಿ ಮತ್ತು ವಿನ್ಯಾಸವನ್ನು ಹೊಂದಿದ್ದು, ನೆರೆದಿದ್ದ ಪ್ರೇಕ್ಷಕರಲ್ಲಿ ಮತ್ತು ಆಯೋಜಕರಲ್ಲಿ ಆಶ್ಚರ್ಯವನ್ನು ಉಂಟುಮಾಡಿತು.

5 / 6

ಸಂಘಟಕರು ಸ್ಪರ್ಧೆಯನ್ನು ಬಹಳ ಅಚ್ಚುಕಟ್ಟಾಗಿ ರೂಪಿಸಿದ್ದರು. ಮಹಿಳೆಯರ ಪ್ರತಿಭೆಗೆ ಸೂಕ್ತ ವೇದಿಕೆ ಒದಗಿಸುವ ಮೂಲಕ, ತಾವು ಯಾರಿಗೂ ಕಡಿಮೆ ಇಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಬಳಿಕ ಸ್ಪರ್ಧಾಳುಗಳು ತಮ್ಮ ಅನುಭವ ಹಂಚಿಕೊಂಡರು.

6 / 6

ಈ ಸ್ಪರ್ಧೆಯು ಕೇವಲ ಗೆಲುವಿಗಾಗಿ ಸೀಮಿತವಾಗಿರದೆ, ಭಾರತೀಯ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ಉಳಿಸುವ ಪ್ರಯತ್ನವಾಗಿತ್ತು. ಆಧುನಿಕತೆ ನಡುವೆಯೂ ನಮ್ಮ ಪರಂಪರೆಯ ಸಿಹಿ ಪದಾರ್ಥಗಳ ಮಹತ್ವವನ್ನು ಸಾರಿ ಹೇಳಿದೆ.

Loading...
Unable to load recommendations.
Follow Us