‘ಸರಿಗಮಪ’ ಗೆಲುವಿನ ಬಳಿಕೆ ಮರೆಯದೇ ಪುನೀತ್ ಸಮಾಧಿಗೆ ಭೇಟಿ ನೀಡಿದ ಶಿವಾನಿ

Updated on: Jun 14, 2025 | 7:00 AM

ಇತ್ತೀಚೆಗೆ ಸರಿಗಮಪ ಫಿನಾಲೆ ನಡೆದಿದೆ. ಇದರಲ್ಲಿ ಶಿವಾನಿ ಅವರು ವಿನ್ನರ್ ಆಗಿದ್ದಾರೆ. ಈ ಗೆಲುವಿನ ಬಳಿಕ ಅವರು ಮರೆಯದೇ ಪುನೀತ್ ರಾಜ್​ಕುಮಾರ್ ಅವರ ಸಮಾಧಿಗೆ ಭೇಟಿ ನೀಡಿದ್ದಾರೆ. ಅಲ್ಲಿ ನಮನ ಸಲ್ಲಿಕೆ ಮಾಡಿದ್ದಾರೆ. ಆ ಸಂದರ್ಭದ ಫೋಟೋಗಳು ವೈರಲ್ ಆಗಿ ಗಮನ ಸೆಳೆದಿವೆ.

1 / 5
ಇತ್ತೀಚೆಗೆ ಜೀ ಕನ್ನಡದ ‘ಸರಿಗಮಪ ಸೀಸನ್ 21’ರ ಫಿನಾಲೆ ನಡೆಯಿತು. ಎಲ್ಲರನ್ನು ಹಿಂದಿಕ್ಕಿ ಬೀದರನ್ ಶಿವಾನಿ ಅವರು ವಿನ್ನರ್ ಆದರು. ಹೆಚ್ಚು ವೋಟ್ ಪಡೆದು ಅವರು ಗೆಲುವಿನ ನಗು ಬೀರಿದರು. ಆ ಬಳಿಕ ಅವರು ಅಪ್ಪು ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ.

2 / 5
ಪುನೀತ್ ರಾಜ್​ಕುಮಾರ್ ಎಂದರೆ ಅನೇಕರಿಗೆ ಅಚ್ಚುಮೆಚ್ಚು. ಅವರು ಕೇವಲ ಉತ್ತಮ ನಟ ಮಾತ್ರ ಆಗಿರಲಿಲ್ಲ. ಅವರು ಒಳ್ಳೆಯ ಗಾಯಕರು ಕೂಡ ಆಗಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಅವರು ಹೃದಯವಂತ ವ್ಯಕ್ತಿ ಆಗಿದ್ದರು. ಈ ಕಾರಣದಿಂದಲೇ ಅವರಿಗೆ ಅಷ್ಟೊಂದು ಅಭಿಮಾನಿಗಳು ಇದ್ದರು.

3 / 5
ಪುನೀತ್ ಸಮಾಧಿ ಬಳಿಯೇ ರಾಜ್​ಕುಮಾರ್ ಸಮಾಧಿ ಕೂಡ ಇದೆ. ಹೀಗಾಗಿ, ಶಿವಾನಿ ಅವರು ತಂದೆ ತಾಯಿ ಜೊತೆ ಅಲ್ಲಿಗೆ ಭೇಟಿ ನೀಡಿದ್ದಾರೆ. ರಾಜ್​ಕುಮಾರ್ ಕೂಡ ತಮ್ಮ ಅದ್ಭುತ ಕಂಠದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

4 / 5
ಶಿವಾನಿ ಅವರು ಮೊದಲಿನಿಂದಲೂ ತಮ್ಮ ಗಾಯನದ ಮೂಲಕ ಜನಮನ ಗೆದ್ದರು. ಅವರು ಉತ್ತರ ಕರ್ನಾಟಕದವರು. ಹೀಗಾಗಿ, ಅಲ್ಲಿಯವರು ಹೆಚ್ಚಿನ ಸಂಖ್ಯೆಯಲ್ಲಿ ಗಾಯಕಿಗೆ ವೋಟ್ ಮಾಡಿ ಅವರನ್ನು ಗೆಲ್ಲಿಸಿದ್ದಾರೆ. ಅವರ ಗೆಲುವಿಗೆ ಕೆಲವರು ಅಪಸ್ವರ ತೆಗೆದಿದ್ದೂ ಇದೆ.

5 / 5
ಪುನೀತ್ ರಾಜ್​ಕುಮಾರ್ ಅವರು ನಮ್ಮನ್ನು ಅಗಲಿ ಕೆಲವು ವರ್ಷಗಳು ಕಳೆದಿವೆ. ಆದರೆ, ಅವರಿಲ್ಲ ಎನ್ನುವ ನೋವು ಎಂದಿಗೂ ಮರೆ ಆಗುವಂಥದ್ದಲ್ಲ. ಅವರು ಇನ್ನೂ ನಮ್ಮ ಜೊತೆ ಇರಬೇಕಿತ್ತು ಎಂದು ಅನೇಕರು ಈಗಲೂ ಅಂದುಕೊಳ್ಳುತ್ತಾರೆ.