
ಶಿವರಾಜ್ಕುಮಾರ್ ಹಾಗೂ ಗೀತಾ ದಂಪತಿಗೆ ಇಂದು (ಮೇ 19) ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಈ ದಂಪತಿಗೆ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆ ತಿಳಿಸುತ್ತಿದ್ದಾರೆ. ಇನ್ನಷ್ಟು ವರ್ಷಗಳ ಕಾಲ ಇವರು ಹೀಗೆ ಒಟ್ಟಾಗಿ ಬಾಳಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.

ವಿವಾಹ ವಾರ್ಷಿಕೋತ್ಸವ ಎಂದಾಗ ಅವರ ಅಭಿಮಾನಿಗಳ ವಲಯದಲ್ಲಿ ಹಳೆಯ ಫೋಟೋಗಳು ವೈರಲ್ ಆಗೋದು ಸಾಮಾನ್ಯ. ಅದೇ ರೀತಿ, ಶಿವರಾಜ್ಕುಮಾರ್ ವಿವಾಹದ ಕ್ಷಣ ಹೇಗಿತ್ತು ಎಂಬುದರ ಝಲಕ್ ಸಿಕ್ಕಿದೆ. 1986ರ ಮೇ 19ರಂದು ಇವರು ವಿವಾಹ ಆದರು. ಈ ದಾಂಪತ್ಯಕ್ಕೆ 39 ವರ್ಷ.

ಶಿವಣ್ಣನ ಮದುವೆ ಸಂಭ್ರಮದಲ್ಲಿ ರಾಜ್ಕುಮಾರ್ ಅವರು ಖುಷಿಖುಷಿಯಿಂದ ಓಡಾಡಿಕೊಂಡಿದ್ದರು. ಕನ್ನಡ ಮಾತ್ರವಲ್ಲದೆ, ಬೇರೆ ಚಿತ್ರರಂಗದವರು ಕೂಡ ಆಗಮಿಸಿದ್ದರು ಮತ್ತು ದಂಪತಿಗೆ ಶುಭಾಶಯ ಕೋರಿದ್ದರು. ಈ ಫೋಟೋಗಳು ಗಮನ ಸೆಳೆದಿವೆ. ಅಣ್ಣಾವ್ರ ಫೋಟೋ ಹೈಲೈಟ್ ಆಗಿದೆ.

ಗೀತಾ ಅವರು ಪ್ರತಿ ಹಂತದಲ್ಲೂ ಶಿವರಾಜ್ಕುಮಾರ್ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಅವರನ್ನು ಪ್ರೋತ್ಸಾಹಿಸುತ್ತಾ ಬರುತ್ತಿದ್ದಾರೆ. ಇದು ಶಿವರಾಜ್ಕುಮಾರ್ ಅವರ ಬಲ ಹೆಚ್ಚಿಸಿದೆ. ಅವರಿಗೆ ಕ್ಯಾನ್ಸರ್ ಆದಾಗ ಗೀತಾ ಅವರು ಸಾಕಷ್ಟು ಸಹಾಯ ಮಾಡಿದ್ದರು.

ಗೀತಾ ಶಿವರಾಜ್ಕುಮಾರ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡುತ್ತೇನೆ ಎಂದಾಗ ಶಿವಣ್ಣ ಅವರು ಬೆಂಬಲ ನೀಡಿದರು. ಶಿವರಾಜ್ಕುಮಾರ್ ಅವರು ತಾವೇ ತೆರಳಿ ಪ್ರಚಾರ ಮಾಡಿದರು. ಆದರೆ, ಗೀತಾ ಅವರಿಗೆ ಚುನಾವಣೆಯಲ್ಲಿ ಗೆಲುವು ಸಿಗಲಿಲ್ಲ.
Published On - 10:07 am, Mon, 19 May 25