
ಬರೋಬ್ಬರಿ 9 ವರ್ಷಗಳ ಬಳಿಕ ಕನ್ನಡಕ್ಕೆ ಕಮ್ಬ್ಯಾಕ್ ಮಾಡುತ್ತಿದ್ದಾರೆ ಬಹುಭಾಷಾ ನಟಿ ಶ್ರಿಯಾ ಶರಣ್. ‘ಕಬ್ಜ’ ಮೂಲಕ ಅವರು ಕನ್ನಡಕ್ಕೆ ಮರಳುತ್ತಿದ್ದಾರೆ.

ಉಪೇಂದ್ರ ಹಾಗೂ ಕಿಚ್ಚ ಸುದೀಪ್ ನಟನೆಯ ‘ಕಬ್ಜ’ಕ್ಕೆ ಶ್ರಿಯಾ ಶರಣ್ ನಾಯಕಿಯಾಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಇರುವ ಶ್ರಿಯಾ ಶರಣ್ ಇತ್ತೀಚೆಗೆ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಆ ಫೋಟೋಶೂಟ್ನಲ್ಲಿ ಸೀರೆ ಧರಿಸಿ, ಹಳ್ಳಿ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ ನಟಿ.

ಫೋಟೋಗಳಿಗೆ ಕ್ಯಾಪ್ಶನ್ ಬರೆದಿರುವ ಶ್ರಿಯಾ, ‘ಸೆಟ್ಟೇರಲು ಸಾಧ್ಯವಾಗದ ಚಿತ್ರವೊಂದಕ್ಕೆ ಮಾಡಿಸಿಕೊಂಡ ಫೋಟೋಶೂಟ್ ಇದು’ ಎಂದು ಬರೆದುಕೊಂಡಿದ್ದಾರೆ.

ಜತೆಗೆ ಧನಾತ್ಮಕವಾಗಿರಿ, ಕನಸುಗಳು ನಿಜವಾಗುತ್ತವೆ ಎಂಬರ್ಥದಲ್ಲಿಯೂ ಅವರು ಬರೆದುಕೊಂಡಿದ್ದಾರೆ.

ಶ್ರಿಯಾ ಶರಣ್ ಫೋಟೋಗಳೀಗ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.