AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pashmina Roshan: ರೋಷನ್​ ಕುಟುಂಬದಿಂದ ಮತ್ತೊಂದು ಕುಡಿ ಬಾಲಿವುಡ್​ಗೆ ಎಂಟ್ರಿ; ಯಾರು ಈ ಪಶ್ಮಿನಾ?

Who is Pashmina Roshan: ರೋಷನ್ ಕುಟುಂಬದಿಂದ ಮತ್ತೋರ್ವರು ಬಾಲಿವುಡ್​ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಹೃತಿಕ್ ರೋಷನ್ ಅವರ ಸೋದರ ಸಂಬಂಧಿ ಪಶ್ಮಿನಾ ರೋಷನ್​ ಅವರ ಚೊಚ್ಚಲ ಚಿತ್ರ ಅನೌನ್ಸ್ ಆಗಿದೆ. ‘ಇಷ್ಕ್​ ವಿಷ್ಕ್​​ ರಿಬೌಂಡ್​’ನಲ್ಲಿ ನಟಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಗೀತ ನಿರ್ದೇಶಕ ರಾಜೇಶ್ ರೋಷನ್​ ಪುತ್ರಿ ಪಶ್ಮಿನಾ. ಅವರಿಗೆ ಹೃತಿಕ್ ಶುಭಾಶಯ ಹೇಳಿದ್ದಾರೆ.

TV9 Web
| Edited By: |

Updated on: Jun 03, 2022 | 2:52 PM

Share
ರೋಷನ್ ಕುಟುಂಬದಿಂದ ಮತ್ತೋರ್ವರು ಬಾಲಿವುಡ್​ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಹೃತಿಕ್ ರೋಷನ್ ಅವರ ಸೋದರ ಸಂಬಂಧಿ ಪಶ್ಮಿನಾ ರೋಷನ್​ ಅವರ ಚೊಚ್ಚಲ ಚಿತ್ರ ಅನೌನ್ಸ್ ಆಗಿದೆ.

1 / 7
ಬಾಲಿವುಡ್​ನ ಹಿಟ್ ಚಿತ್ರಗಳಲ್ಲಿ ಒಂದಾದ ‘ಇಷ್ಕ್​ ವಿಷ್ಕ್​’ನ ಸೀಕ್ವೆಲ್ ಮೂಡಿಬರಲಿದ್ದು, ‘ಇಷ್ಕ್ ವಿಷ್ಕ್ ರಿಬೌಂಡ್’ ಎಂದು ಹೆಸರಿಡಲಾಗಿದೆ. ಅದರಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಪಶ್ಮಿನಾ.

2 / 7
ಹೊಸ ಚಿತ್ರದ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಹಂಚಿಕೊಂಡಿರುವ ಪಶ್ಮಿನಾ, ಹಲವು ವರ್ಷಗಳ ಶ್ರಮ ಪ್ರತಿಫಲ ನೀಡುತ್ತಿದೆ ಎಂದು ಬರೆದುಕೊಂಡಿದ್ದಾರೆ. ನಟಿಗೆ ಅಭಿಮಾನಿಗಳು ಶುಭಾಶಯ ಹೇಳಿದ್ದಾರೆ.

3 / 7
‘ಇಷ್ಕ್​ ವಿಷ್ಕ್ ರಿಬೌಂಡ್’ ಚಿತ್ರದ ಪೋಸ್ಟರ್​. ಈ ಚಿತ್ರದಲ್ಲಿ ಪಶ್ಮಿನಾ ಅವರೊಂದಿಗೆ ರೋಹಿತ್ ಸರಫ್, ಜಿಬ್ರಾನ್ ಖಾನ್, ನೈಲಾ ಗ್ರೇವಲ್​ ಖಾಣಿಸಿಕೊಳ್ಳುತ್ತಿದ್ದಾರೆ.

4 / 7
ಖ್ಯಾತ ಸಂಗೀತ ನಿರ್ದೇಶಕ ರಾಜೇಶ್ ರೋಷನ್ ಅವರ ಪುತ್ರಿ ಪಶ್ಮಿನಾ ರೋಷನ್​. ಹೃತಿಕ್ ರೋಷನ್​ ಅವರ ತಂದೆ ರಾಕೇಶ್ ರೋಷನ್ ಹಾಗೂ ರಾಜೇಶ್ ರೋಷನ್​ ಸಹೋದರರು. ರೋಷನ್​ ಕುಟುಂಬದಿಂದ ಪಶ್ಮಿನಾ ಕೂಡ ಬಾಲಿವುಡ್​ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

5 / 7
ಪಶ್ಮಿನಾಗೆ ಹೃತಿಕ್ ರೋಷನ್ ಇನ್​ಸ್ಟಾಗ್ರಾಂನಲ್ಲಿ ಶುಭಾಶಯ ಹೇಳಿದ್ಧಾರೆ. ಆಪ್ತವಾದ ಬರಹ ಬರೆದಿರುವ ಹೃತಿಕ್, ‘‘ನಿನ್ನ ಕುರಿತು ಹೆಮ್ಮೆಯಾಗುತ್ತಿದೆ’’ ಎಂದು ಹೇಳಿ, ಚಿತ್ರಕ್ಕೆ ಶುಭಾಶಯ ಕೋರಿದ್ದಾರೆ.

6 / 7
ಪಶ್ಮಿನಾಗೆ ನಟನೆ ತೀರಾ ಹೊಸದೇನೂ ಅಲ್ಲ. ರಂಗಭೂಮಿಯಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಇಈಗ ಪಶ್ಮಿನಾ ಮೊದಲ ಚಿತ್ರದ ಬಗ್ಗೆ ಕುತೂಹಲ ಮೂಡಿದೆ.

7 / 7