- Kannada News Photo gallery Rajesh Roshan daughter Pashmina Roshan will debut with Ishq Vishk rebound Hrithik Roshan wishes to Pashmina
Pashmina Roshan: ರೋಷನ್ ಕುಟುಂಬದಿಂದ ಮತ್ತೊಂದು ಕುಡಿ ಬಾಲಿವುಡ್ಗೆ ಎಂಟ್ರಿ; ಯಾರು ಈ ಪಶ್ಮಿನಾ?
Who is Pashmina Roshan: ರೋಷನ್ ಕುಟುಂಬದಿಂದ ಮತ್ತೋರ್ವರು ಬಾಲಿವುಡ್ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಹೃತಿಕ್ ರೋಷನ್ ಅವರ ಸೋದರ ಸಂಬಂಧಿ ಪಶ್ಮಿನಾ ರೋಷನ್ ಅವರ ಚೊಚ್ಚಲ ಚಿತ್ರ ಅನೌನ್ಸ್ ಆಗಿದೆ. ‘ಇಷ್ಕ್ ವಿಷ್ಕ್ ರಿಬೌಂಡ್’ನಲ್ಲಿ ನಟಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಗೀತ ನಿರ್ದೇಶಕ ರಾಜೇಶ್ ರೋಷನ್ ಪುತ್ರಿ ಪಶ್ಮಿನಾ. ಅವರಿಗೆ ಹೃತಿಕ್ ಶುಭಾಶಯ ಹೇಳಿದ್ದಾರೆ.
Updated on: Jun 03, 2022 | 2:52 PM

ರೋಷನ್ ಕುಟುಂಬದಿಂದ ಮತ್ತೋರ್ವರು ಬಾಲಿವುಡ್ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಹೃತಿಕ್ ರೋಷನ್ ಅವರ ಸೋದರ ಸಂಬಂಧಿ ಪಶ್ಮಿನಾ ರೋಷನ್ ಅವರ ಚೊಚ್ಚಲ ಚಿತ್ರ ಅನೌನ್ಸ್ ಆಗಿದೆ.

ಬಾಲಿವುಡ್ನ ಹಿಟ್ ಚಿತ್ರಗಳಲ್ಲಿ ಒಂದಾದ ‘ಇಷ್ಕ್ ವಿಷ್ಕ್’ನ ಸೀಕ್ವೆಲ್ ಮೂಡಿಬರಲಿದ್ದು, ‘ಇಷ್ಕ್ ವಿಷ್ಕ್ ರಿಬೌಂಡ್’ ಎಂದು ಹೆಸರಿಡಲಾಗಿದೆ. ಅದರಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಪಶ್ಮಿನಾ.

ಹೊಸ ಚಿತ್ರದ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪಶ್ಮಿನಾ, ಹಲವು ವರ್ಷಗಳ ಶ್ರಮ ಪ್ರತಿಫಲ ನೀಡುತ್ತಿದೆ ಎಂದು ಬರೆದುಕೊಂಡಿದ್ದಾರೆ. ನಟಿಗೆ ಅಭಿಮಾನಿಗಳು ಶುಭಾಶಯ ಹೇಳಿದ್ದಾರೆ.

‘ಇಷ್ಕ್ ವಿಷ್ಕ್ ರಿಬೌಂಡ್’ ಚಿತ್ರದ ಪೋಸ್ಟರ್. ಈ ಚಿತ್ರದಲ್ಲಿ ಪಶ್ಮಿನಾ ಅವರೊಂದಿಗೆ ರೋಹಿತ್ ಸರಫ್, ಜಿಬ್ರಾನ್ ಖಾನ್, ನೈಲಾ ಗ್ರೇವಲ್ ಖಾಣಿಸಿಕೊಳ್ಳುತ್ತಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕ ರಾಜೇಶ್ ರೋಷನ್ ಅವರ ಪುತ್ರಿ ಪಶ್ಮಿನಾ ರೋಷನ್. ಹೃತಿಕ್ ರೋಷನ್ ಅವರ ತಂದೆ ರಾಕೇಶ್ ರೋಷನ್ ಹಾಗೂ ರಾಜೇಶ್ ರೋಷನ್ ಸಹೋದರರು. ರೋಷನ್ ಕುಟುಂಬದಿಂದ ಪಶ್ಮಿನಾ ಕೂಡ ಬಾಲಿವುಡ್ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಪಶ್ಮಿನಾಗೆ ಹೃತಿಕ್ ರೋಷನ್ ಇನ್ಸ್ಟಾಗ್ರಾಂನಲ್ಲಿ ಶುಭಾಶಯ ಹೇಳಿದ್ಧಾರೆ. ಆಪ್ತವಾದ ಬರಹ ಬರೆದಿರುವ ಹೃತಿಕ್, ‘‘ನಿನ್ನ ಕುರಿತು ಹೆಮ್ಮೆಯಾಗುತ್ತಿದೆ’’ ಎಂದು ಹೇಳಿ, ಚಿತ್ರಕ್ಕೆ ಶುಭಾಶಯ ಕೋರಿದ್ದಾರೆ.

ಪಶ್ಮಿನಾಗೆ ನಟನೆ ತೀರಾ ಹೊಸದೇನೂ ಅಲ್ಲ. ರಂಗಭೂಮಿಯಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಇಈಗ ಪಶ್ಮಿನಾ ಮೊದಲ ಚಿತ್ರದ ಬಗ್ಗೆ ಕುತೂಹಲ ಮೂಡಿದೆ.




