AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Keerthy Suresh: ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ​ ಬರೆದ ಕೀರ್ತಿ ಸುರೇಶ್; ‘ಮಹಾನಟಿ’ ಹೇಳಿದ್ದೇನು?

Keerthy Suresh Photos: ಕೀರ್ತಿ ಸುರೇಶ್ ಅಭಿಮಾನಿಗಳಿಗೆ ಒಂದು ಭಾವನಾತ್ಮಕ ಪತ್ರ ಬರೆದಿದ್ದಾರೆ. ಕಳೆದ ಕೆಲವು ಸಮಯದಿಂದ ಅವರ ಚಿತ್ರಗಳು ಹೆಚ್ಚು ಸದ್ದು ಮಾಡುತ್ತಿರಲಿಲ್ಲ. ಇದೀಗ ‘ಸರ್ಕಾರು ವಾರಿ ಪಾಟ’ ಯಶಸ್ಸು ಕಂಡಿದ್ದು, ನಟಿ ಸಂತಸ ಹಂಚಿಕೊಂಡಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಸವಾಲಿನ ಪಾತ್ರ ಆಯ್ದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ..

TV9 Web
| Edited By: |

Updated on: Jun 04, 2022 | 7:30 AM

Share
ಬಹುಭಾಷಾ ನಟಿ ಕೀರ್ತಿ ಸುರೇಶ್ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಅವರು ನಟಿಸಿದ್ದ ಕೆಲವು ಚಿತ್ರಗಳು ಸೋಲು ಕಂಡಿದ್ದವು. ಹೀಗಾಗಿ ನಟಿಗೆ ಸವಾಲಿನ ಸಂದರ್ಭ ಎದುರಾಗಿತ್ತು. ಆದರೆ ಇದೀಗ ನಟಿಯ ಮುಖದಲ್ಲಿ ಮತ್ತೆ ನಗು ಮೂಡಿದೆ.

1 / 7
ಇದಕ್ಕೆ ಕಾರಣ, ಮಹೇಶ್ ಬಾಬು ಜತೆಗೆ ಕೀರ್ತಿ ಸುರೇಶ್ ತೆರೆ ಹಂಚಿಕೊಂಡಿದ್ದ ‘ಸರ್ಕಾರು ವಾರಿ ಪಾಟ’ ಸೂಪರ್ ಹಿಟ್ ಆಗಿದೆ. ಅಲ್ಲದೇ ಆ ಚಿತ್ರದ ಎರಡು ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದು, ಕೀರ್ತಿ ಸುರೇಶ್​ಗೆ ಮತ್ತೆ ಸ್ಟಾರ್​ ಪಟ್ಟ ತಂದುಕೊಟ್ಟಿದೆ.

2 / 7
ಹೀಗಾಗಿ ನಟಿ ಖುಷಿಯಾಗಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪತ್ರ ಹಂಚಿಕೊಂಡಿರುವ ಕೀರ್ತಿ ಸುರೇಶ್, ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

3 / 7
ಕೀರ್ತಿ ಸುರೇಶ್ ತಮ್ಮ ಪತ್ರದಲ್ಲಿ ‘‘ವೃತ್ತಿ ಜೀವನದಲ್ಲಿ ಏರಿಳಿತಗಳು ಸಾಮಾನ್ಯ. ಇತ್ತೀಚಿನ ಸಮಯ ನನ್ನನ್ನು ಪರೀಕ್ಷೆಗೆ ಒಡ್ಡಿತ್ತು. ಆದರೆ ಸರ್ಕಾರು ವಾರಿ ಪಾಟ ಚಿತ್ರದ ಸಾನಿ ಕಾಯಿದಮ್​ ಹಾಗೂ ಕಲಾವತಿ ಹಾಡುಗಳನ್ನು ಜನರು ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಇದಕ್ಕಾಗಿ ಎಲ್ಲರಿಗೂ ಆಭಾರಿ’’ ಎಂದು ಬರೆದಿದ್ದಾರೆ ಕೀರ್ತಿ.

4 / 7
ಹಾಗೆಯೇ ಮುಂದಿನ ದಿನಗಳಲ್ಲಿ ಮತ್ತಷ್ಟು ಸವಾಲಿನ ಚಿತ್ರಗಳನ್ನು ಒಪ್ಪಿಕೊಳ್ಳುವುದಾಗಿ ನಟಿ ಘೋಷಿಸಿದ್ದಾರೆ. ಅಲ್ಲದೇ ಅವುಗಳಿಗೆ ಪ್ರತಿಕ್ರಿಯೆ ಹೇಗೆ ಬಂದರೂ ಸರಿ, ಆದರೆ ಹೊಸ ಸವಾಲುಗಳನ್ನು ಸ್ವೀಕರಿಸುತ್ತೇನೆ ಎಂದು ಬರೆದಿದ್ದಾರೆ ಕೀರ್ತಿ.

5 / 7
ಕೀರ್ತಿ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಪಾತ್ರಗಳಿಂದ ಸಖತ್ ಅಭಿಮಾನಿಗಳನ್ನು ಸಂಪಾದಿಸಿದವರು. ಇದೀಗ ಅವರ ಘೋಷಣೆಯಿಂದ ನಟಿ ಮತ್ತೆ ಅಂತಹ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಸೂಚನೆ ಸಿಕ್ಕಿದೆ.

6 / 7
ಸದ್ಯ ಕೀರ್ತಿ ಸುರೇಶ್ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ‘ದಸರಾ’, ‘ಭೋಲಾ ಶಂಕರ್’ ಮೊದಲಾದ ಚಿತ್ರಗಳಲ್ಲಿ ನಟಿ ಕಾಣಿಸಿಕೊಳ್ಳುತ್ತಿದ್ದಾರೆ.

7 / 7