Kia EV6 electric vehicle: ವೈರ್‌ಲೆಸ್ ಚಾರ್ಜಿಂಗ್, ಎಲೆಕ್ಟ್ರಿಕ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್ ಮತ್ತು ಲ್ಯಾಪ್‌ಟಾಪ್‌ಗಳು, ಫ್ರಿಜ್‌ಗಳು ಅಥವಾ ಟಿವಿಗಳಂತಹ ಮನೆಯ ಸಾಧನಗಳನ್ನು ಚಾರ್ಜ್ ಮಾಡಲು ಹಿಂದಿನ ಸೀಟಿನ ಕೆಳಗೆ ಮೂರು-ಪಿನ್ ಸಾಕೆಟ್ ಅನ್ನು ಸಹ ನೀಡಲಾಗಿದೆ.
Jun 02, 2022 | 6:51 PM
ಕೊರಿಯನ್ ಕಾರು ತಯಾರಕ ಕಿಯಾ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರ್ Kia EV6 ಅನ್ನು ಬಿಡುಗಡೆ ಮಾಡಿದೆ. EV6 ಕಿಯಾದ ಎಲೆಕ್ಟ್ರಿಕ್-ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ (e-GMP) ಅನ್ನು ಆಧರಿಸಿದ ಮೊದಲ ಆಲ್-ಎಲೆಕ್ಟ್ರಿಕ್ ಕಾರ್ ಎಂಬುದು ವಿಶೇಷ.
1 / 5
ಸದ್ಯ ಭಾರತದ 100 ಘಟಕಗಳಲ್ಲಿ ಮಾತ್ರ Kia EV6 ಕಾರ್ಗಳನ್ನು ಬಿಡುಗಡೆ ಮಾಡಲಾಗಿದ್ದು, ಈಗಾಗಲೇ 355 ಯುನಿಟ್ಗೆ ಬುಕಿಂಗ್ ಅನ್ನು ಸ್ವೀಕರಿಸಿದ್ದಾರೆ. ಅದರಂತೆ EV6 ನ ಮೊದಲ ಘಟಕದ ವಿತರಣೆಗಳು ಈ ವರ್ಷದ ಸೆಪ್ಟೆಂಬರ್‌ನಿಂದ ಪ್ರಾರಂಭವಾಗಲಿದೆ.
2 / 5
Kia EV6 ಕಾರನ್ನು GT RWD ಮತ್ತು AWD ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. RWD GT ಆವೃತ್ತಿಯು ಗರಿಷ್ಠ 229 hp ಮತ್ತು 350 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿದೆ. GT-Line AWD ರೂಪಾಂತರವು 347 hp ಮತ್ತು 605 Nm ನ ಗರಿಷ್ಠ ಟಾರ್ಕ್‌ನ ಶಕ್ತಿಯನ್ನು ಉತ್ಪಾದಿಸುತ್ತದೆ. ಹಾಗೆಯೇ EV6 ಕೇವಲ 3.5 ಸೆಕೆಂಡುಗಳಲ್ಲಿ ಶೂನ್ಯದಿಂದ 100 kmph ವೇಗವನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿದೆ ವಿಶೇಷ. ಇನ್ನು ಈ ಕಾರಿನ ಗರಿಷ್ಠ ವೇಗ ಗಂಟೆಗೆ 192 kmph ಹೊಂದಿದೆ.
3 / 5
ಇನ್ನು Kia EV6 ನಲ್ಲಿ ಅನೇಕ ಸುಧಾರಿತ ಫೀಚರ್ಗಳನ್ನು ನೀಡಲಾಗಿದೆ. ಇದರಲ್ಲಿ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ ಮತ್ತು 12.3-ಇಂಚಿನ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಚಾರ್ಜಿಂಗ್, ಎಲೆಕ್ಟ್ರಿಕ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್ ಮತ್ತು ಲ್ಯಾಪ್‌ಟಾಪ್‌ಗಳು, ಫ್ರಿಜ್‌ಗಳು ಅಥವಾ ಟಿವಿಗಳಂತಹ ಮನೆಯ ಸಾಧನಗಳನ್ನು ಚಾರ್ಜ್ ಮಾಡಲು ಹಿಂದಿನ ಸೀಟಿನ ಕೆಳಗೆ ಮೂರು-ಪಿನ್ ಸಾಕೆಟ್ ಅನ್ನು ಸಹ ನೀಡಲಾಗಿದೆ. ಅಗತ್ಯವಿದ್ದರೆ, ಇತರ ಎಲೆಕ್ಟ್ರಿಕ್ ಕಾರುಗಳಿಗೂ ಇದನ್ನು ಚಾರ್ಜ್ ಮಾಡಬಹುದು ಎಂಬುದು ವಿಶೇಷ.
4 / 5
Kia EV6 ಕಾರಿನಲ್ಲಿ EV6 77.4 kWh ಬ್ಯಾಟರಿ ಪ್ಯಾಕ್ ಅನ್ನು ನೀಡಲಾಗಿದ್ದು, ಇದನ್ನು ಇದು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ 528 ಕಿಲೋ ಮೀಟರ್ವರೆಗೆ ಚಲಿಸಬಹುದು. ಈ ಕಾರಿನ ಆರಂಭಿಕ ಬೆಲೆ 59.95 ಲಕ್ಷ ರೂ. ಹಾಗೆಯೇ ಟಾಪ್ ಮಾಡೆಲ್ ಬೆಲೆ 64.96 ಲಕ್ಷ ರೂ. (ಎಕ್ಸ್ ಶೋ ರೂಂ).