‘ಸ್ಪೈಡರ್ ಮ್ಯಾನ್: ಅಕ್ರಾಸ್ ದಿ ಸ್ಪೈಡರ್ ವರ್ಸ್’ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿ ಸದ್ದು ಮಾಡಿದೆ. ಇದು ಅನಿಮೇಟೆಡ್ ಸಿನಿಮಾ. ಈ ಚಿತ್ರ ಶೀಘ್ರವೇ ರಿಲೀಸ್ ಆಗಲಿದೆ. ಈಗ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದೆ.
‘ಸ್ಪೈಡರ್ ಮ್ಯಾನ್: ಅಕ್ರಾಸ್ ದಿ ಸ್ಪೈಡರ್ ವರ್ಸ್’ ಸಿನಿಮಾ ಇಂಗ್ಲಿಷ್ ಮಾತ್ರವಲ್ಲದೆ ಹಿಂದಿ ಹಾಗೂ ಪಂಜಾಬಿ ಭಾಷೆಗಳಲ್ಲೂ ರಿಲೀಸ್ ಆಗಲಿದೆ. ಈ ಸಿನಿಮಾಗೆ ಶುಭ್ಮನ್ ಗಿಲ್ ಧ್ವನಿ ಇರಲಿದೆ.
ಹೌದು, ಪವಿತ್ರ ಪ್ರಭಾಕರ್ ಪಾತ್ರಕ್ಕೆ ಶುಭ್ಮನ್ ಅವರ ಧ್ವನಿ ಇರಲಿದೆ. ಇದಕ್ಕಾಗಿ ಅಭಿಮಾನಿಗಳು ಕಾದಿದ್ದಾರೆ. ಈ ವಿಚಾರವನ್ನು ಶುಭ್ಮನ್ ಗಿಲ್ ಕೂಡ ಖಚಿತಪಡಿಸಿದ್ದಾರೆ.
ಶುಭ್ಮನ್ ಗಿಲ್ ಬ್ಯಾಟಿಂಗ್ ಮೂಲಕ ತಮ್ಮ ಪವರ್ ಏನು ಎಂಬುದನ್ನು ತೋರಿಸಿದ್ದಾರೆ. ಈಗ ಅವರು ಚಿತ್ರರಂಗದಲ್ಲೂ ಗುರುತಿಸಿಕೊಳ್ಳುತ್ತಿದ್ದಾರೆ ಅನ್ನೋದು ವಿಶೇಷ.
ಶುಭ್ಮನ್ ಗಿಲ್ ಅವರಿಗೆ ಸ್ಪೈಡರ್ ಮ್ಯಾನ್ ಸೀರಿಸ್ ಬಗ್ಗೆ ವಿಶೇಷ ಪ್ರೀತಿ ಇದೆ. ಸಿನಿಮಾದಲ್ಲಿ ಬರುವ ಪಾತ್ರ ಒಂದಕ್ಕೆ ಧ್ವನಿ ನೀಡುತ್ತಿರುವ ಮೊದಲ ಆಟಗಾರ ಎನ್ನುವ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ.