ಮೇಕಿಂಗ್ ಚಾರ್ಜ್‌ಗಳು, ಆಭರಣ ವಿನ್ಯಾಸ ಮತ್ತು ಅದನ್ನು ತಯಾರಿಸುವ ಜನರನ್ನು ಅವಲಂಬಿಸಿ ಉತ್ಪಾದನಾ ಶುಲ್ಕಗಳು ಬದಲಾಗುತ್ತವೆ. ನಾಣ್ಯ ರೂಪದಲ್ಲಿ ಚಿನ್ನವನ್ನು ಖರೀದಿಸಿದ ನಂತರ, ಅದನ್ನು ಆಭರಣವನ್ನಾಗಿ ಮಾಡಲು 8 ರಿಂದ 16 ಪ್ರತಿಶತದಷ್ಟು ಉತ್ಪಾದನಾ ಶುಲ್ಕವನ್ನು ಸೇರಿಸಲಾಗುತ್ತದೆ. ಇವುಗಳಲ್ಲಿ ಕೆಲವು ಉತ್ಪಾದನಾ ಶುಲ್ಕವಾಗಿದೆ ಮತ್ತು ಕೆಲವು ಸವಕಳಿ ರೂಪದ ವಚ್ಚವನ್ನು ನಿಮಗೆ ಖರೀದಿ ಮೇಲೆ ವಿಧಿಸಲಾಗುತ್ತದೆ. ಚಿನ್ನಾಭರಣ ತಯಾರಿಕೆಯಲ್ಲಿ ಒಂದಷ್ಟು ಚಿನ್ನ ವೃಥಾ ವ್ಯರ್ಥವಾಗುತ್ತದೆ. ಇದನ್ನು ಸವಕಳಿ ಅಥವಾ ವ್ಯರ್ಥ ಎಂದು ಕರೆಯಲಾಗುತ್ತದೆ. ಆಭರಣಗಳನ್ನು ತಯಾರಿಸಲು ವಿಧಿಸುವ ಮೊತ್ತವನ್ನು ಮಜೂರಿ ಎಂದು ಕರೆಯಲಾಗುತ್ತದೆ. ಇದು ಆಭರಣದ ಆಧಾರದ ಮೇಲೆ ಬದಲಾಗುತ್ತದೆ.