
ಅಲ್ಲು ಅರ್ಜುನ್ ಅವರಿಗೆ ‘ಅತ್ಯುತ್ತಮ ನಟ’ ಅವಾರ್ಡ್ ಸಿಕ್ಕಿದೆ. ‘ಪುಷ್ಪ 2’ ಸಿನಿಮಾ ನಟನೆಗ ಈ ಪ್ರಶಸ್ತಿ ದೊರಕಿದೆ. ಈ ಚಿತ್ರ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಹಲವು ದಾಖಲೆಗಳನ್ನು ಸೃಷ್ಟಿ ಮಾಡಿ ಬೀಗಿದೆ. ಈ ವಿಚಾರ ಅವರಿಗೆ ಖುಷಿ ಕೊಟ್ಟಿದೆ.

‘ಪುಷ್ಪ 2’ ಚಿತ್ರದ ನಿರ್ದೇಶನಕ್ಕೆ ಸುಕುಮಾರ್ ಅವರಿಗೆ ಅತ್ಯುತ್ತಮ ನಿರ್ದೇಶನ ಪ್ರಶಸ್ತಿ ಸಿಕ್ಕಿದೆ. ದೇವಿ ಶ್ರೀ ಪ್ರಸಾದ್ ಅವರು ಇದೇ ಚಿತ್ರದ ಸಂಗೀತ ಸಂಯೋಜನೆಗಾಗಿ ಅತ್ಯುತ್ತಮ ಸಂಗೀತ ಸಂಯೋಜಕ ಅವಾರ್ಡ್ ಪಡೆದುಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಅತ್ಯುತ್ತಮ ನಟಿ ಅವಾರ್ಡ್ ಪಡೆದಿದ್ದಾರೆ. ‘ಪುಷ್ಪ 2’ ಚಿತ್ರದ ನಟನೆಗೆ ಅವರಿಗೆ ಈ ಪ್ರಶಸ್ತಿ ದೊರಕಿದೆ ಎಂಬುದು ವಿಶೇಷ. ಈ ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ಅವರ ಖ್ಯಾತಿ ವಿಶ್ವ ಮಟ್ಟದಲ್ಲಿ ಪಸರಿಸಿದೆ.

ತೇಜ್ ಸಜ್ಜಾ ಅವರು ಅತ್ಯುತ್ತಮ ನಟ (ಕ್ರಿಟಿಕ್ಸ್) ಅವಾರ್ಡ್ ಪಡೆದಿದ್ದಾರೆ. 2024ರಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದ ‘ಹನುಮಾನ್’ ಸಿನಿಮಾಗಾಗಿ ಈ ಪ್ರಶಸ್ತಿ ಸಿಕ್ಕಿದೆ. ಈ ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ ಗಮನ ಸೆಳೆದಿತ್ತು.

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಚಿತ್ರ ‘ಅತ್ಯುತ್ತಮ ಸಿನಿಮಾ’ ಅವಾರ್ಡ್ ಪಡೆದಿದೆ. ಈ ಸಿನಿಮಾ ಸೈಂಟಿಫಿಕ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬಂದಿತ್ತು. ಈ ಚಿತ್ರ ಎಲ್ಲರ ಮೆಚ್ಚುಗೆ ಪಡೆದು ಬೀಗಿದೆ.