ಶಿವಮೊಗ್ಗದಲ್ಲಿ ಸೀತಾರಾಮರ ಕಲ್ಯಾಣೋತ್ಸವ: ತುಂಗಾ ನದಿಯಲ್ಲಿ ಜರುಗಿದ ತೆಪ್ಪೋತ್ಸವ, ಫೋಟೋಸ್ ನೋಡಿ
ಶಿವಮೊಗ್ಗದ ತುಂಗಾ ನದಿಯಲ್ಲಿ ಸೀತಾರಾಮ ಕಲ್ಯಾಣೋತ್ಸವದ ಅಂಗವಾಗಿ ಅದ್ಧೂರಿ ತೆಪ್ಪೋತ್ಸವ ನಡೆಯಿತು. ಸೀತೆ, ರಾಮ, ಲಕ್ಷ್ಮಣ ಮತ್ತು ಆಂಜನೇಯರ ವಿಗ್ರಹಗಳನ್ನು ಅಲಂಕರಿಸಲಾಗಿತ್ತು. ತೆಪ್ಪವನ್ನು ಪುಷ್ಪ ಮತ್ತು ದೀಪಗಳಿಂದ ಅಲಂಕರಿಸಲಾಗಿತ್ತು. ನದಿಯಲ್ಲಿ ಐದು ಪ್ರದಕ್ಷಿಣೆ ಹಾಕಲಾಯಿತು. ಸಾವಿರಾರು ಭಕ್ತರು ಈ ದೃಶ್ಯವನ್ನು ಕಣ್ತುಂಬಿಕೊಂಡರು. ವಿದ್ಯುತ್ ಅಲಂಕಾರವು ಉತ್ಸವಕ್ಕೆ ಮತ್ತಷ್ಟು ವೈಭವ ತಂದಿತ್ತು.