
ಸಖತ್ ಕಾಮಿಡಿ, ಆಕ್ಷನ್ ಜೊತೆಗೆ ಸ್ನೇಹ ಮತ್ತು ಪ್ರೀತಿಯ ಸೆಂಟಿಮೆಂಟ್ ಅನ್ನು ಒಳಗೊಂಡಿದ್ದ ಅದ್ಭುತ ಹಾಡುಗಳು ಸಹ ಇದ್ದ ‘ಹನುಮಾನ್ ಜಂಕ್ಷನ್’ ಸಿನಿಮಾ 2001 ರಲ್ಲಿ ಬಿಡುಗಡೆ ಆಗಿತ್ತು. ಇದೀಗ ಈ ಸಿನಿಮಾ 25 ವರ್ಷಗಳ ಬಳಿಕ ಜೂನ್ 28 ರಂದು ಮರು ಬಿಡುಗಡೆ ಆಗಲಿದೆ.

ಹೊಸ ರೀತಿಯ ಪ್ರೇಮಕತೆ ಹೊಂದಿದ್ದ ‘ಕುಮಾರಿ 21ಎಫ್’ ಸಿನಿಮಾ 2015 ರಲ್ಲಿ ಬಿಡುಗಡೆ ಆಗಿತ್ತು. ಆಗ ಅಷ್ಟೇನೂ ಸದ್ದು ಮಾಡಿರಲಿಲ್ಲ. ಆದರೆ ಆ ಬಳಿಕ ಈ ಸಿನಿಮಾ ಕಲ್ಟ್ ಆಯಿತು. ಇದೀಗ ಸಿನಿಮಾ ಬಿಡುಗಡೆ ಆಗಿ 10 ವರ್ಷವಾದ ಕಾರಣ ಜುಲೈ 10 ರಂದು ಮರು ಬಿಡುಗಡೆ ಆಗುತ್ತಿದೆ.

ರವಿತೇಜ ನಟನೆಯ ‘ಮಿರಪಕಾಯ’ ಸಿನಿಮಾ 2011 ರಲ್ಲಿ ಬಿಡುಗಡೆ ಆಗಿತ್ತು. ಆಕ್ಷನ್-ಕಾಮಿಡಿ ಹೊಂದಿದ್ದ ಸಾಧಾರಣ ಸಿನಿಮಾ ಇದು. ಸಿನಿಮಾಕ್ಕೆ ಕಲ್ಟ್ ಫಾಲೋವಿಂಗ್ ಸಹ ಇಲ್ಲ ಆದರೂ ಸಹ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಜುಲೈ 11 ರಂದು ರಿ ರಿಲೀಸ್ ಆಗಲಿದೆ.

ಸಮಂತಾ ಹಾಗೂ ನಾಗ ಚೈತನ್ಯ ನಟಿಸಿರುವ ‘ಯೇ ಮಾಯ ಚೇಸಾವೆ’ ಸಿನಿಮಾ ಬಿಡುಗಡೆ ಆಗಿ 15 ವರ್ಷಗಳಾದ ಕಾರಣಕ್ಕೆ ಈ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗುತ್ತಿದೆ. ಎವರ್ಗ್ರೀನ್ ಪ್ರೇಮಕತೆಯಾದ ಈ ಸಿನಿಮಾ ಜುಲೈ 18 ರಂದು ಬಿಡುಗಡೆ ಆಗಲಿದೆ.

ಸೂರ್ಯ, ತಮನ್ನಾ ನಟನೆಯ ತಮಿಳು ಸಿನಿಮಾ ‘ಆಯನ್’ ಸ್ಮಗ್ಲರ್ ಕತೆಯುಳ್ಳ ಭಾರತದ ಅತ್ಯುತ್ತಮ ಸಿನಿಮಾ. 2009 ರಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾದ ತೆಲುಗು ಆವೃತ್ತಿ (ವೀಡೊಕ್ಕಡೆ) ಜುಲೈ 19 ರಂದು ಬಿಡುಗಡೆ ಆಗಲಿದೆ. ಸೂರ್ಯ ನಟನೆಯ ಎರಡು ಹಳೆಯ ಸಿನಿಮಾಗಳು ಒಂದೇ ದಿನದ ಅಂತರದಲ್ಲಿ ಮರು ಬಿಡುಗಡೆ ಆಗುತ್ತಿವೆ.

ಸೂರ್ಯ, ಅಸಿನ್ ನಟನೆಯ ತಮಿಳು ಸಿನಿಮಾ ‘ಗಜಿನಿ’ ತೆಲುಗಿನಲ್ಲೂ ಸಖತ್ ಹಿಟ್ ಆಗಿತ್ತು. ಈ ಸಿನಿಮಾ ಬಿಡುಗಡೆ ಆಗಿ 25 ವರ್ಷಗಳಾಗಿದ್ದು ಇದೀಗ ಸಿನಿಮಾದ ತೆಲುಗು ಆವೃತ್ತಿ ಜುಲೈ 18 ರಂದು ಮರು ಬಿಡುಗಡೆ ಆಗುತ್ತಿದೆ.