‘ನಾನೂ ಮಗು ಹೊಂದಬೇಕು’; ಮನಸ್ಸಿನ ಮಾತು ಹೇಳಿದ ಶೋಭಿತಾ ಧುಲಿಪಾಲ್
‘ನಾನು ಯಾವುದೇ ಕನಸು ಅಥವಾ ನಿರೀಕ್ಷೆಗಳನ್ನು ಇಟ್ಟುಕೊಂಡು ಸಾಗುವವನಲ್ಲ. ನಾನು ಆ ಕ್ಷಣದಲ್ಲಿ ಬದುಕುತ್ತೇನೆ ಅಷ್ಟೇ. ನಿಶ್ಚಿತಾರ್ಥ ಸರಳವಾಗಿ ನಡೆಯಿತು. ನಾನು ಹೇಗೆ ಆಲೋಚಿಸಿದೆನೋ ಹಾಗೆಯೇ ನಡೆಯಿತು’ ಎಂದಿದ್ದಾರೆ ಅವರು.
1 / 5
ನಟಿ ಶೋಭಿತಾ ಧುಲಿಪಾಲ್ ಹಾಗೂ ನಾಗ ಚೈತನ್ಯ ಅವರು ಆಗಸ್ಟ್ ತಿಂಗಳಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡರು. ಇಬ್ಬರೂ ಕೆಲವು ವರ್ಷ ಡೇಟಿಂಗ್ ಮಾಡಿ ನಂತರ ಪ್ರೀತಿಗೆ ಹೊಸ ಅರ್ಥ ಕೊಟ್ಟರು. ಈಗ ಅವರು ಮನಸ್ಸಿನ ಮಾತನ್ನು ಹೇಳಿಕೊಂಡಿದ್ದಾರೆ.
2 / 5
‘ನಾನು ಯಾವುದೇ ಕನಸು ಅಥವಾ ನಿರೀಕ್ಷೆಗಳನ್ನು ಇಟ್ಟುಕೊಂಡು ಸಾಗುವವನಲ್ಲ. ನಾನು ಆ ಕ್ಷಣದಲ್ಲಿ ಬದುಕುತ್ತೇನೆ ಅಷ್ಟೇ. ನಿಶ್ಚಿತಾರ್ಥ ಸರಳವಾಗಿ ನಡೆಯಿತು. ನಾನು ಹೇಗೆ ಆಲೋಚಿಸಿದೆನೋ ಹಾಗೆಯೇ ನಡೆಯಿತು’ ಎಂದಿದ್ದಾರೆ ಅವರು.
3 / 5
‘ನಿಶ್ಚಿತಾರ್ಥ ಪರ್ಫೆಕ್ಟ್ ಆಗಿ ನಡೆದಿದೆ. ಸುಂದರವಾದ ಸಂಗತಿಗಳು ನಡೆಯುವಾಗ ಅಲಂಕಾರವನ್ನು ನಾನು ಅನುಭವಿಸುವುದಿಲ್ಲ. ಆ ಕ್ಷಣವೇ ನನ್ನ ಮನಸ್ಸನ್ನು ತುಂಬುತ್ತದೆ’ ಎಂದು ಶೋಭಿತಾ ಹೇಳಿದ್ದಾರೆ.
4 / 5
‘ನಾನು ಯಾವಾಗಲೂ ಮಾತೃತ್ವ ಅನುಭವಿಸಲು ಬಯಸುತ್ತೇನೆ. ನಾನು ಅದರ ಬಗ್ಗೆ ತುಂಬಾ ಸ್ಪಷ್ಟವಾಗಿದ್ದೆ. ನಾನು ಯಾವಾಗಲೂ ಮದುವೆಯಾಗಬೇಕು ಎಂದು ಬಯಸುತ್ತೇನೆ’ ಎಂದಿದ್ದಾರೆ ಶೋಭಿತಾ. ಮದುವೆಯಾದ ಕೆಲವೇ ವರ್ಷಗಳಲ್ಲಿ ಇವರು ಮಕ್ಕಳು ಮಾಡಿಕೊಳ್ಳುವ ಆಲೋಚನೆಯಲ್ಲಿ ಇದ್ದಾರಂತೆ.
5 / 5
ಡಿಸೆಂಬರ್ ವೇಳೆಗೆ ಶೋಭಿತಾ ಹಾಗೂ ನಾಗ ಚೈತನ್ಯ ಮದುವೆ ಆಗುವ ಸಾಧ್ಯತೆ ಇದೆ. ರಾಜಸ್ಥಾನದಲ್ಲಿ ಇವರ ವಿವಾಹ ಜರುಗುವ ಸಾಧ್ಯತೆ ಇದೆ. ಶೀಘ್ರವೇ ಈ ಬಗ್ಗೆ ಜೋಡಿ ಮಾಹಿತಿ ನೀಡುವ ಸಾಧ್ಯತೆ ಇದೆ.