ಸೋನಾಕ್ಷಿ ಸಿನ್ಹಾ ಪ್ರತಿಭಾನ್ವಿತ ನಟಿಯಾಗಿದ್ದು, ಅತ್ಯುತ್ತಮ ನಟನೆಯ ಮೂಲಕವೇ ಸಾಕಷ್ಟು ಖ್ಯಾತಿ ಗಳಿಸಿದವರು.
ಇವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಅದರಂತೆ ತಮ್ಮ ಆಕರ್ಷಕ ಫೋಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳನ್ನು ಆಕರ್ಷಿಸುತ್ತಾರೆ.
ಇದೀಗ, ಸೋನಾಕ್ಷಿ ಸಿನ್ಹಾ, ಮಾಲ್ಡೀವ್ಸ್ಗೆ ಭೇಟಿ ನೀಡಿದಾಗ ತೆಗೆಸಿಕೊಂಡ ಒಂದಷ್ಟು ಫೋಟೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಫೋಟೋದಲ್ಲಿ ನಟಿ ಮತ್ಸ್ಯಕನ್ಯೆಯಂತೆ ಕಂಗೊಳಿಸುತ್ತಿದ್ದು, ಭಾರಿ ವೈರಲ್ ಆಗುತ್ತಿದೆ.
ಚಲನಚಿತ್ರಗಳಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ ಸೋನಾಕ್ಷಿ ಸಿನ್ಹಾ, 2010ರಲ್ಲಿ ದಬಾಂಗ್ ಎಂಬ ಆಕ್ಷನ್ ಚಲನಚಿತ್ರದಲ್ಲಿ ರಜ್ಜೋ ಪಾಂಡೆ ಪಾತ್ರವನ್ನು ನಿರ್ವಹಿಸುವ ಮೂಲಕ ತಮ್ಮ ಮೊದಲ ನಟನೆಯನ್ನು ಆರಂಭಿಸಿದರು.
Published On - 12:45 pm, Sat, 28 May 22