
ಕಿಚ್ಚ ಸುದೀಪ್ ಮತ್ತು ಪ್ರಿಯಾ ವಿವಾಹ ವಾರ್ಷಿಕೋತ್ಸವ ಇಂದು (ಅಕ್ಟೋಬರ್ 18) ಸ್ಯಾಂಡಲ್ವುಡ್ನ ಬಲು ಜನಪ್ರಿಯ ಜೋಡಿಗಳಲ್ಲಿ ಸುದೀಪ್ ಹಾಗೂ ಪ್ರಿಯಾ ಅವರದ್ದೂ ಒಂದು.
ಪ್ರಿಯಾ ಮತ್ತು ಸುದೀಪ್ ಅವರು 2001 ರ ಅಕ್ಟೋಬರ್ 18ರಂದು ವಿವಾಹವಾದರು. ಇವರದ್ದು ಪ್ರೇಮ ವಿವಾಹ, ಪ್ರಿಯಾ ಅವರು ಮೂಲತಃ ಮಲಯಾಳಿ. ಅವರು ಯುವ ಉದ್ಯಮಿ ಆಗಿದ್ದರು.
2004 ರಲ್ಲಿ ಪ್ರಿಯಾ ಮತ್ತು ಸುದೀಪ್ ಅವರಿಗೆ ಪುತ್ರಿಯ ಜನನವಾಯ್ತು. ಅವರೇ ಸಾನ್ವಿ ಸುದೀಪ್. ಬರೋಬ್ಬರಿ 25 ವರ್ಷಗಳಿಂದಲೂ ಈ ಜೋಡಿ ಜೊತೆಯಾಗಿದೆ.
ಪ್ರಿಯಾ ಮತ್ತು ಸುದೀಪ್ ಆದರ್ಶ ದಂಪತಿಗಳಾಗಿದ್ದು, ಇತ್ತೀಚೆಗಷ್ಟೆ ಬಿಗ್ಬಾಸ್ ವೇದಿಕೆಯ ಮೇಲೂ ಸಹ ಈ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು.
ಪ್ರಿಯಾ ಅವರು ಇದೀಗ ಮಗಳು ಸಾನ್ವಿ ಅವರೊಟ್ಟಿಗೆ ಸೇರಿ ನಿರ್ಮಾಪಕಿಯೂ ಆಗಿದ್ದಾರೆ. ಜೊತೆಗೆ ತಮ್ಮನ್ನು ತಾವು ಸಾಮಾಜಿಕ ಕಾರ್ಯಗಳಲ್ಲಿಯೂ ಸಹ ತೊಡಗಿಸಿಕೊಂಡಿದ್ದಾರೆ.
25ನೇ ವಿವಾಹ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಪ್ರಿಯಾ ಮತ್ತು ಸುದೀಪ್ ಅವರು ಆಚರಿಸಿಕೊಂಡಿದ್ದಾರೆ. ಅವರುಗಳ ಕೆಲ ಚಿತ್ರಗಳು ಇಲ್ಲಿವೆ...
ಸುದೀಪ್ ಅವರು ಇದೀಗ ಬಿಗ್ಬಾಸ್ ಮತ್ತು ಕೆಲವು ಹೊಸ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರ ನಟನೆಯ ‘ಬಿಲ್ಲ ರಂಗ ಭಾಷಾ’ ಶೀಘ್ರವೇ ರಿಲೀಸ್ ಸಹ ಆಗಲಿದೆ.
Published On - 5:34 pm, Sun, 18 October 26