
ಶಾರುಖ್ ಖಾನ್ ಅವರಿಗೆ ದೊಡ್ಡ ಸ್ಟಾರ್ಡಮ್ ಇದೆ. ಈ ಕಾರಣದಿಂದಲೇ ಅವರ ಮಕ್ಕಳಾದ ಆರ್ಯನ್ ಖಾನ್, ಸುಹಾನಾ ಹಾಗೂ ಅಬ್ರಾಮ್ ಖಾನ್ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಸುಹಾನಾ ಖಾನ್ ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ಬಂದಿದ್ದಾರೆ. ಅವರು ಚಿತ್ರರಂಗಕ್ಕೆ ಕಾಲಿಡೋಕೆ ರೆಡಿ ಆಗಿದ್ದಾರೆ. ಈ ಸಿನಿಮಾ ಬಗ್ಗೆ ಸುಹಾನಾಗೆ ನಿರೀಕ್ಷೆ ಇದೆ.

‘ದಿ ಆರ್ಚೀಸ್’ ಸಿನಿಮಾದಲ್ಲಿ ಸುಹಾನಾ ನಟಿಸುತ್ತಿದ್ದಾರೆ. ಜೋಯಾ ಅಖ್ತರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಕೆಲಸಗಳಲ್ಲಿ ಸುಹಾನಾ ಬ್ಯುಸಿ ಆಗಿದ್ದಾರೆ.

ಸುಹಾನಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಸ್ಟಾರ್ ನಟನ ಮಗಳು ಎಂಬ ಕಾರಣಕ್ಕೆ ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ 28 ಲಕ್ಷ ಹಿಂಬಾಲಕರು ಇದ್ದಾರೆ.

ಸುಹಾನಾ ಹಂಚಿಕೊಂಡಿರುವ ಹೊಸ ಫೋಟೋಗಳು ಎಲ್ಲರ ಗಮನ ಸೆಳೆಯುತ್ತಿದೆ. ಅವರ ಬೋಲ್ಡ್ ಫೋಟೋಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.