
ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಇನ್ನೂ ಬಾಲಿವುಡ್ಗೆ ಎಂಟ್ರಿ ಕೊಟ್ಟಿಲ್ಲ. ಆದರೆ ಅವರಿಗೆ ಅಭಿಮಾನಿ ಬಳಗ ದಿನದಿಂದ ದಿನಕ್ಕೆ ಏರುತ್ತಲೇ ಇದೆ.

ಸುಹಾನಾಗೆ ಇನ್ಸ್ಟಾಗ್ರಾಂನಲ್ಲಿ ಸುಮಾರು 1 ಮಿಲಿಯನ್ಗೂ ಹೆಚ್ಚು ಫಾಲೋವರ್ಗಳಿದ್ದಾರೆ. ನಟಿಯಾಗಿ ಕಾಣಿಸಿಕೊಳ್ಳಲಿರುವ ಅವರ ಇತ್ತೀಚಿನ ಫೋಟೋಗಳು ವೈರಲ್ ಆಗಿವೆ.

ಖ್ಯಾತ ವಸ್ತ್ರವಿನ್ಯಾಸಕ ಮನೀಶ್ ಮಲ್ಹೋತ್ರಾ ಅವರು ವಿನ್ಯಾಸ ಮಾಡಿರುವ ಸೀರೆಯನ್ನು ಧರಿಸಿ ಸುಹಾನಾ ಪೋಸ್ ನೀಡಿದ್ದಾರೆ.

ಈ ಹಿಂದೆ ಮನೀಶ್ ಅವರೇ ವಿನ್ಯಾಸಗೊಳಿಸಿದ ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದ್ದರು.

ಚಿತ್ರಗಳ ವಿಷಯಕ್ಕೆ ಬಂದರೆ, ಸುಹಾನಾ ಬಾಲಿವುಡ್ ಪ್ರವೇಶದ ಕುರಿತು ಹಲವು ಮಾಹಿತಿಗಳು ಹೊರಬರುತ್ತಿವೆ.

ಖ್ಯಾತ ನಿರ್ದೇಶಕಿ ಜೋಯಾ ಅಖ್ತರ್ ನಿರ್ದೇಶನ ಮಾಡಲಿರುವ ಚಿತ್ರದಲ್ಲಿ ಸುಹಾನಾ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಗಳು ಹೇಳಿವೆ. ಈ ಕುರಿತು ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ.
Published On - 9:45 am, Tue, 1 March 22